ಕಾಶ್ಮೀರದ ಪಹಲ್ಗಾಮ್ ದಾಳಿಗೆ (Pahalgam terror attack) ಪ್ರತಿಯಾಗಿ ಭಾರತ ಮಿಲಿಟರಿ ಕಾರ್ಯಾಚರಣೆ ನಡೆಸುವುದು ಬಹುತೇಕ ಖಚಿತವಾಗಿದ್ದು, ಆದ್ರೆ ಭಾರತ ಯಾವ ರೀತಿ ಸೇನಾ ಕಾರ್ಯಾಚರಣೆ ನಡೆಸಲಿದೆ ಎಂದು ಇದುವರೆಗೂ ಯಾವುದೇ ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ.

ಆದ್ರೆ ಉನ್ನತ ಮೂಲಗಳ ಮಾಹಿತಿಯ ಪ್ರಕಾರ ಭಾರತೀಯ ಸೇನೆ ಪಾಕಿಸ್ತಾನದ ವಿರುದ್ಧ ಕಾರ್ಯಾಚರಣೆಗೆ ಈಗಾಗಲೇ ಬ್ಲೂಪ್ರಿಂಟ್ ರೆಡಿ (Blueprint) ಮಾಡಿಕೊಂಡಿದೆ ಎನ್ನಲಾಗಿದೆ.ಈ ಮಾಹಿತಿಯ ಪ್ರಕಾರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (POK) ಮೊದಲ ಕಾರ್ಯಾಚಾರಣೆ ನಡೆಯಲಿದೆ ಎನ್ನಲಾಗಿದೆ.

ಹೌದು, ಪಾಕ್ ಆಕ್ರಮಿತ ಕಾಶ್ಮೀರದ ಒಳ ನುಗ್ಗಿ ಸೇನೆ ದಾಳಿ ಮೊದಲು ದಾಳಿ ಮಾಡುವ ಸಾದ್ಯತೆಯಿದೆ.ಪಿಓಕೆಯ ಒಳಗಡೆ ಇರೋ ಉಗ್ರರ ನೆಲೆ ಸೇನೆಯ ಮೊದಲ ಟಾರ್ಗೇಟ್ ಆಗಲಿದೆ.ಇಲ್ಲಿನ ಎಲ್ಲಾ ಉಗ್ರನೆಲೆಗಳನ್ನ ಗುರಿಯಾಗಿಸಿ ದಾಳಿ ನಡೆಯಲಿದ್ದು, ಅದಕ್ಕಾಗಿ ವಾಯು ಸೇನೆ ಮತ್ತು ಭೂಸೇನಾ ಅಧಿಕಾರಿಗಳಿಂದ ತಯಾರಿ ನಡೆಸಲಾಗುತ್ತಿದೆ.

ಈಗಾಗಲೇ ಈ ಕುರಿತ ಎಲ್ಲಾ ತಯಾರಿಗಳು ತೆರೆಮರೆಯಲ್ಲಿ ನಡೆದಿದ್ದು ಮುಂದಿನ 24-36 ಗಂಟೆಯಲ್ಲಿ ದಾಳಿ ನಡೆಯುವ ಸಂಭವವಿದೆ. ಹೀಗಾಗಿ ಇಂದಿನ ಮೋದಿ ಸರಣಿ ಸಭೆಯ ನಂತರ ದಾಳಿ ನಡೆಯುವ ಸಾದ್ಯತೆ ಇದೆ ಎನ್ನಲಾಗಿದೆ.