ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ (ಕೆಬಿಡಿಸಿ) ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಆರ್. ಲೀಲಾವತಿ (R Leelavathi) ಅವರನ್ನು 12.04.2025 ರಂದು ಪಿಎಂಎಲ್‌ಎ(PMLA), 2002 ರ ನಿಬಂಧನೆಗಳ ಅಡಿಯಲ್ಲಿ, ಹಣ ವರ್ಗಾವಣೆ ಅಪರಾಧದಲ್ಲಿ ಭಾಗಿಯಾಗಿದ್ದಾರೆಂದು ಕಂಡು ಬಂದ ಕಾರಣ, ಬೆಂಗಳೂರಿನ ಇಡಿ ಬಂಧಿಸಿದೆ.

ಕೆಬಿಡಿಸಿ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಆರ್. ಲೀಲಾವತಿ ಅವರನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯದ (PMLA) ಮುಂದೆ ಹಾಜರುಪಡಿಸಲಾಯಿತು ಮತ್ತು ನ್ಯಾಯಾಲಯ ಆರೋಪಿಯ ಇಡಿ ಕಸ್ಟಡಿಗೆ 7 ದಿನಗಳ ಕಾಲ ಅನುಮತಿ ನೀಡಿದೆ.