ಕಾಂಗ್ರೆಸ್ ನ ಹಿರಿಯ ನಾಯಕ, ಶಾಸಕ ಬಸವರಾಜ ರಾಯರೆಡ್ಡಿ (Basavaraja rayareddy) ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದೆ. ಭ್ರಷ್ಟಾಚಾರದಲ್ಲಿ ಕರ್ನಾಟಕ (Karnataka) ನಂಬರ್ ಓನ್ ಆಗಿದೆ ಎಂಬ ರಾಯರೆಡ್ಡಿ ಹೇಳಿಕೆ ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಹೀಗಾಗಿ ಈ ಕುರಿತು ಬೆಂಗಳೂರಿನಲ್ಲಿ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (MB Patil) ಪ್ರತಿಕ್ರಿಯಿಸಿದ್ದು, ಬಸವರಾಜ ರಾಯರೆಡ್ಡಿ ಅವರು ಯಾವ ಅರ್ಥದಲ್ಲಿ ಈ ರೀತಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಅದಕ್ಕೆ ಅವರೇ ವಿವರಣೆ ನೀಡಬೇಕು ಎಂದಿದ್ದಾರೆ.
ಇನ್ನು ಪಕ್ಷದ ಮುಖಂಡರಾಗಿ ಈ ರೀತಿ ಹೇಳಿರುವುದು ನಿಶ್ಚಿತವಾಗಿಯೂ ಸರ್ಕಾರಕ್ಕೆ ಮುಜುಗರ ತರುವ ವಿಚಾರ ಎಂದ ಅವರು, ಪಕ್ಷ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೆ, ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂದಿದ್ದಾರೆ.

ಬಸವರಾಜ ರಾಯರೆಡ್ಡಿ ಅವರು ಯಾರ್ ವಿರುದ್ಧ ಆರೋಪ ಮಾಡಿದ್ರು ಹೇಳಲಿ.ನಮ್ಮ ಸಿಎಂ ಇದ್ದಾರೆ, ಪಕ್ಷದ ವರಿಷ್ಠರು ಇದ್ದಾರೆ.ಪಕ್ಷದ ಅಧ್ಯಕ್ಷರು ಇದ್ದಾರೆ ಕ್ರಮಕೈಗೊಳ್ತಾರೆ ಎಂದು ರಾಯರೆಡ್ಡಿ ಹೇಳಿಕೆಗೆ ಸಚಿವ ಎಂ.ಬಿ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.