2008ರ ಮುಂಬೈ ಭಯೋತ್ಪಾದಕ ದಾಳಿಯ (Mumbai terir attack) ಮಾಸ್ಟರ್ ಮೈಂಡ್ ತಹವೂರ್ ರಾಣಾನನ್ನು (Tahawwur rana) ಭಾರತಕ್ಕೆ ಹಸ್ತಾಂತರಿಸಲಾಗಿದೆ. ನಿನ್ನೆ ಮಧ್ಯಾಹ್ನ 1.10 ಕ್ಕೆ ಅಮೆರಿಕಾದಿಂದ ವಿಶೇಷ ವಿಮಾನದಲ್ಲಿ ಅಧಿಕಾರಿಗಳು ಕರೆದೊಯ್ದಿದ್ದರೆ.ಇಂದು ಮಧ್ಯಾಹ್ನ ಈ ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆಗಲಿದ್ದು ತಹವೂರ್ ರಾಣಾನನ್ನು ಅಮೆರಿಕಾದಿಂದ NIA, ಇಂಟಲಿಜೆನ್ಸ್ ಬ್ಯೂರೋ ಅಧಿಕಾರಿಗಳು ಕರೆತರುತ್ತಿದ್ದಾರೆ.ಒಮ್ಮೆ ದೆಹಲಿಗೆ ಬಂದಿಳಿಯುತ್ತಿದ್ದಂತೆ ಅಧಿಕೃತವಾಗಿ ತಹವೂರ್ ರಾಣಾ ನನ್ನು NIA ಬಂಧಿಸಲಿದೆ.

ಆ ನಂತರ ದೆಹಲಿಯ ಸ್ಪೆಷಲ್ NIA ಕೋರ್ಟ್ ಗೆ ಹಾಜರುಪಡಿಸಿ NIA ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ. ಈ ಮಧ್ಯೆಈತನನ್ನು ಮುಂಬೈ ಕೋರ್ಟ್ ನಲ್ಲಿ ವಿಚಾರಣೆ ನಡೆಸದೇ ದೆಹಲಿ ಕೋರ್ಟ್ ನಲ್ಲಿ ವಿಚಾರಣೆ ನಡೆಸಲು ನಿರ್ಧಾರ ಮಾಡಲಾಗಿದೆ. ಇದರ ಜೊತೆಗೆ ತಹವೂರ್ ರಾಣಾನನ್ನು ಮುಂಬೈ ನ ಅರ್ಥರ್ ರೋಡ್ ಜೈಲು ಬದಲು ದೆಹಲಿಯ ತಿಹಾರ್ ಜೈಲಿನಲ್ಲೇ ಹೈಸೆಕ್ಯುರಿಟಿ ಸೆಲ್ ನಲ್ಲಿ ಇರಿಸಲು ತೀರ್ಮಾನ ಮಾಡಲಾಗಿದೆ.

ಈತ ಮುಂಬೈ ದಾಳಿಗೂ ಮುನ್ನ ಮುಂಬೈಗೆ ಭೇಟಿ ನೀಡಿ ಎಲ್ಲೆಲ್ಲಿ ಪಾಕ್ ಉಗ್ರರು ದಾಳಿ ನಡೆಸಬೇಕು ಎಂದು ಸ್ಕೆಚ್ ಹಾಕಿಕೊಟ್ಟಿದ್ದು ಇದೇ ತಹವೂರ್ ರಾಣಾ. ಹೀಗಾಗಿ ಡೇವಿಡ್ ಕೋಲಮನ್ ಹೆಡ್ಲಿ ಜೊತೆಗೆ ತಹವೂರ್ ರಾಣಾನೇ ದಾಳಿಯ ಮಾಸ್ಟರ್ ಮೈಂಡ್ ಎಂದು ಪರಿಗಣನೆ ಮಾಡಲಾಗಿದೆ.ಮುಂಬೈ ದಾಳಿಗೆ ಲಷ್ಕರ್ ಇ ತೋಯ್ಬಾ ಉಗ್ರರಿಗೆ ದಾಳಿಯ ಸ್ಕೆಚ್ ಹಾಕಿಕೊಟ್ಟಿದ್ದೇ ಈ ತಹವೂರ್ ರಾಣಾ.ಈ ಸ್ಕೆಚ್ ಆಧಾರದ ಮೇಲೆ ಸಮುದ್ರ ಮಾರ್ಗದಲ್ಲಿ ಬಂದು ಪಾಕ್ ನ ಹತ್ತು ಮಂದಿ ಉಗ್ರರು ದಾಳಿ ಮಾಡಿದ್ದರು.ಈ ರಾಣಾನ ಪ್ಲ್ಯಾನ್ ಪ್ರಕಾರವೇ ತಾಜ್ ಹೋಟೆಲ್, ಒಬೆರಾಯ್ ಹೋಟೆಲ್ ಮೇಲೆ ದಾಳಿ ನೆಡಸಲಾಗಿದ್ದು ಹತ್ಯಾಕಾಂಡವನ್ನೇ ನಡೆಸಲಾಗಿತ್ತು.







