ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ (Kumara swamy) ಯುದ್ಧ ಸಾರಿದ ವಿಚಾರಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ (Dr G parameshwar) ಪ್ರತಿಕ್ರಿಯಿಸಿದ್ದು,ಕುಮಾರಸ್ವಾಮಿ ಅವರು ಕೇಂದ್ರ ಸಚಿವರಿದ್ದಾರೆ, ಅವತ ಬಳಿ ದೊಡ್ಡ ಖಾತೆಯಿದೆ.ರಾಜ್ಯ ಸರ್ಕಾರಕ್ಕೆ ಏನು ಸಲಹೆ ಕೊಡ್ತಾರೆ ಅಂತ ನೋಡೊಣ ಎಂದಿದ್ದಾರೆ.

ಇನ್ನು ರಾಜಕೀಯ ಯುದ್ಧ ಅಂದ್ರೆ ಬಂದೂಕು ಹಿಡಿದು ಮಾಡ್ತಾರಾ ? ಯುದ್ಧ ಅಂದ್ರೆ ಟೀಕೆ ಟಿಪ್ಪಣಿ ತಾನೇ..!ಈ ಟೀಕೆಗಳು, ಪ್ರಶ್ನೆಗಳಿಗೆ ಸರ್ಕಾರಕ್ಕೆ ಉತ್ತರ ಕೊಡುವ ಸಾಮರ್ಥ್ಯ ಇದೆ.ಹೀಗಾಗಿ ದಾಖಲಾತಿ ಬಿಡುಗಡೆ ಅಂತ ಹೇಳಿದ್ದಾರೆ.ಅವರು ಬಿಡುಗಡೆ ಮಾಡಲಿ ಆಮೇಲೆ ಉತ್ತರ ಕೋಡುತ್ತೇವೆ ಎಂದಿದ್ದಾರೆ.

ರಾಜ್ಯದ ಜನ ಕುಮಾರಸ್ವಾಮಿ ವಾರ್ ಬಗ್ಗೆ ತೀರ್ಮಾನ ಮಾಡಬೇಕು.ಕೇಂದ್ರ ಯೋಜನೆಗಳು ರಾಜ್ಯಕ್ಕೆ ಸಹಾಯ ಮಾಡಬೇಕು. ಈ ಬಗ್ಗೆ ಕುಮಾರಸ್ವಾಮಿ ಅವರಿಗೆ ವಿನಂತಿ ಮಾಡುತ್ತೇನೆ.ಆದ್ರೆ ಯುದ್ಧ ಮಾಡ್ತೇನೆ ಅಂದ್ರೆ ಜನರು ಗಮನಿಸುತ್ತಾರೆ.ಕುಮಾರಸ್ವಾಮಿ ರಾಜಕೀಯ ಯೋಜನೆ ನನಗೆ ಗೊತ್ತಿಲ್ಲ ಎಂದಿದ್ದಾರೆ.
