ಲೋಕಸಭೆಯಲ್ಲಿ ಅಂಗೀಕಾರಗೊಂಡ ವಕ್ಫ್ ತಿದ್ದುಪಡಿ ಮಸೂದೆ (Waqf amendment act) 2024ಕ್ಕೆ JDU ಬೆಂಬಲ ನೀಡಿದ ಕಾರಣ ಇದೀಗ ಜೆಡಿಯು ಪಕ್ಷದಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಸ್ವಪಕ್ಷೀಯ ಹಲವು ಮುಸ್ಲಿಂ ನಾಯಕರು ಸಿಎಂ ನಿತೀಶ್ ಕುಮಾರ್ (Nitish kumar) ವಿರುದ್ಧ ತಿರುಗಿಬಿದಿದ್ದಾರೆ.

ಹಿರಿಯ ನಾಯಕ ಮೊಹಮ್ಮದ್ ಖಾಸಿಂ ಅನ್ಸಾರಿ (Mohammed khasim ansari) ನಿನ್ನೆ ಪಕ್ಷ ಮತ್ತು ತಮ್ಮ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಜೆಡಿಯು ಪಕ್ಷದ ನಿಲುವು ಜಾತ್ಯಾತೀತ ಮೌಲ್ಯಗಳನ್ನು ಎತ್ತಿಹಿಡಿಯುತ್ತದೆ ಎಂದು ನಂಬಿದ್ದ ಲಕ್ಷಾಂತರ ಭಾರತೀಯ ಮುಸ್ಲಿಮರ ನಂಬಿಕೆಯನ್ನು ಛಿದ್ರಗೊಳಿಸಿರುವ ಕಾರಣ ತಾವು ರಾಜೀನಾಮೆ ನೀಡುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.
ಇನ್ನು ನ್ಸಾರಿಯಂತೆ ಜೆಡಿಯುನ ಹಲವು ಮುಸ್ಲಿಂ ನಾಯಕರು ವಕ್ಫ್ ತಿದ್ದುಪಡಿಯ ಬಗ್ಗೆ ಪಕ್ಷದ ನಿಲುವನ್ನು ಖಂಡಿಸಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ಈ ಬಗ್ಗೆ ಕಾನೂನು ಅಭಿಪ್ರಾಯವನ್ನು ಪಡೆಯುವುದಾಗಿ ಹೇಳಿದ್ದಾರೆ.












