ರಾಜ್ಯದ ಕರಾವಳಿ (Costal Karnataka) ಭಾಗದಲ್ಲಿ ನಿಷೇಧಿತ PFI ಸಂಘಟನೆ ಮತ್ತೆ ಆಕ್ಟಿವ್ ಆಗಿರುವ ಸೂಚನೆಗಳು ಸಿಕ್ಕಿವೆ. ಹೌದು ಮಂಗಳೂರು ಸಿಸಿಬಿ ಪೊಲೀಸರು (CCB police) ಬೃಹತ್ ಅಕ್ರಮ ಪಿಸ್ತೂಲ್ ಮಾರಾಟ ಜಾಲ ಭೇದಿಸಿದ್ದು, ಕರಾವಳಿ ಅಕ್ರಮ ಪಿಸ್ತೂಲ್ ಮಾರಾಟ ಜಾಲ ಪ್ರಕರಣದ ಹಿಂದೆ ನಿಷೇಧಿತ PFI ನಂಟಿರುವುದುದೃಢವಾಗಿದೆ. 

ನೆರೆಯ ರಾಜ್ಯ ಕೇರಳ ಮೂಲದ ನಟೋರಿಯಸ್ ವೆಪೆನ್ ಡೀಲರ್ ಸೇರಿದಂತೆ ಒಟ್ಟು ಐವರನ್ನು ಬಂಧಿಸಲಾಗಿದೆ. ಈ ಬಂಧಿತರಿಂದ ಮೂರು ಪಿಸ್ತೂಲ್ ಹಾಗೂ ಗುಂಡುಗಳನ್ನ ವಶಕ್ಕೆ ಪಡೆದಿದ್ದಾರೆ. ವಾಮಂಜೂರ್ ಮಿಸ್ ಫೈರ್ ಪ್ರಕರಣದಲ್ಲಿ ಬದ್ರುದ್ದೀನ್ ಹಾಗೂ ಇಮ್ರಾನ್ ಎಂಬ್ ಇಬ್ಬರು ನಿಷೇಧಿತ PFI ಮುಖಂಡರಾಗಿದ್ದರು. 

ಈ ಬದ್ರುದ್ದೀನ್ ಯಾನೆ ಪಿಸ್ತೂಲ್‌ನಿಂದ ಗುಂಡು ಹಾರಿ ಸಫಾನ್‌ಗೆ ಗಂಭೀರ ಗಾಯವಾಗಿತ್ತು. ಇಮ್ರಾನ್‌ಗೆ ಅಬ್ದುಲ್ ಲತೀಫ್ ಪಿಸ್ತೂಲ್ ಸರಬರಾಜು ಮಾಡಿದ್ದ ಎನ್ನಲಾಗಿದೆ. ಈತನಿಗೆ ಕೇರಳದಲ್ಲಿ ನಿಷೇಧಿತ PFI ಸಂಘಟನೆಯೊಂದಿಗೆ ನೇರ ಸಂಬಂಧ ಇತ್ತು. ಹೀಗಾಗಿ ಪೊಲೀಸರು ಪ್ರಕರಣದ ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.
			
                                
                                
                                
