KGF, KGF 2 ನಂತರ ಮತ್ತೊಮ್ಮೆ ರಾಕಿಂಗ್ ಸ್ಟಾರ್ ಯಶ್ ರನ್ನು (Rocking star yash) ಸ್ಕ್ರೀನ್ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾದಿದ್ದು, TOXIC ಸಿನಿಮಾ ಬಗ್ಗೆ ಬೆಟ್ಟದಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿದೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್ (Teaser) ಭಾರತೀಯ ಸಿನಿಮಾ ರಂಗದಲ್ಲಿ ಧೂಳೆಬ್ಬಿಸಿದ್ದು ಫುಲ್ ಹವಾ ಕ್ರಿಯೇಟ್ ಮಾಡಿದೆ.

ಈಗಾಗಲೇ ಮುಂಬೈನಲ್ಲಿ (Mumbai) ಸಿನಿಮಾದ ಪ್ರಮುಖ ಭಾಗದ ಚಿತ್ರೀಕರಣ ಮುಗಿದಿದ್ದು, ಆ ನಂತರ ಬೆಂಗಳೂರಿನಲ್ಲೂ ಮುಖ್ಯವಾದ ಪೋರ್ಷನ್ ಗಳನ್ನು ಚಿತ್ರ ತಂಡ ಸೆರೆ ಹಿಡಿದಿದೆ. TOXIC ಸಿನಿಮಾದ ಟೈಟಲ್ ಲಾಂಚ್ ಮಾಡುವ ವೇಳೆ 2025 ರ ಏಪ್ರಿಲ್ ಗೆ ಸಿನಿಮಾ ರಿಲೀಸ್ ಎಂದು ಚಿತ್ರ ತಂಡ ಅನೌನ್ಸ್ ಮಾಡಿತ್ತು. ಆದ್ರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ.

ಆದ್ರೆ ಈಗ ಸಿನಿಮಾದ ಬಹುತೇಕ ಮೇಜರ್ ದೃಶ್ಯಗಳ ಚಿತ್ರೀಕರಣ ಕಂಪ್ಲಿಟ್ ಆಗಿದೆ. ಇನ್ನು ಸಿನಿಮಾದ ಸ್ಟಂಟ್ ಕೊರಿಯೋಗ್ರಾಫರ್ ಜೆ.ಜೆ. ಪೆರ್ರಿ, (JJ Perry) ಸಿನಿಮಾದ ಆ್ಯಕ್ಷನ್ ಸೀಕ್ವೆನ್ಸ್ ಕಂಪ್ಲೇಟ್ ಆಗಿರೋ ಬಗ್ಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಡಿಸೆಂಬರ್ ತಿಂಗಳಲ್ಲಿ ಟಾಕ್ಸಿಕ್ ಬಿಡುಗಡೆ ಆಗೋದು 100% ಕನ್ನರ್ಮ್ ಎನ್ನಲಾಗ್ತಿದೆ.