ಹಳೆಯ ಬಜೆಟ್ ಅನ್ನೇ ಈ ವರ್ಷವೂ ಓದಿ ಸಿದ್ದರಾಮಯ್ಯ ಜನರನ್ನು ಮೂರ್ಖರಾಗಿಸಿದ್ದಾರೆ.

ಬೆಂಗಳೂರು, ಮಾರ್ಚ್ 8: ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಂಡಿಸಿದ ಬಜೆಟ್ ನಲ್ಲಿ ಹೊಸತೇನವೇನೂ ಇಲ್ಲ ಅಂತಾ ಬಿಜೆಪಿ ಎಂಎಲ್ಸಿ ಹೆಚ್ ವಿಶ್ವನಾಥ್ ( H Vishwanath ) ಹೇಳಿದ್ದಾರೆ.. ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಅವರು, ಹಿಂದಿನ ಸಲ ಓದಿದ್ದನ್ನೇ ಈ ಸಲವೂ ಓದಿ ಜನರನ್ನು ಮೂರ್ಖರನ್ನಾಗಿಸಿದ್ದಾರೆ, ದೇಶಕ್ಕೆ ಹೊಸತನವನ್ನು ನೀಡಿದ ಖ್ಯಾತಿ ಕಾಂಗ್ರೆಸ್ ಗೆ ಸಲ್ಲುತ್ತದೆ, ದಾಖಲೆಯ 16 ನೇ ಸಲ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯಗೆ ಏಕತಾನತೆ ಗೊತ್ತಾಗಲಿಲ್ಲವೇ? ಮನಮೋಹನ್ ಸಿಂಗ್ ರನ್ನು ನೋಡಿ ಅವರು ಕಲಿಯಬಾರದೇ ಎಂದು ಹೇಳಿದರು.