2025-26ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಇಂದು (March 7th 2025) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಂದ ವಿಧಾನಸಭೆಯಲ್ಲಿ ಮಂಡನೆಯಾಯಿತು.

ಇದು ಸಿದ್ದರಾಮಯ್ಯ ಅವರ 16ನೇ ಬಜೆಟ್ ಆಗಿದ್ದು, ಅವರು ಬಜೆಟ್ ಮಂಡಿಸಿದ ದಾಖಲೆಯನ್ನು ಮುರಿದಿದ್ದಾರೆ. ಈ ಬಾರಿಯ ಬಜೆಟ್ ಗಾತ್ರವು ₹4,09,549 ಕೋಟಿ (Four Lakh nine thousand five hundred forty nine rs)ರೂಪಾಯಿಗಳಾಗಿದ್ದು, ಇದು ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಬಜೆಟ್ ಆಗಿದೆ.ಈ ಬಜೆಟ್‌ನಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ನಗರ ಸಾರಿಗೆ, ಮೆಟ್ರೋ ವಿಸ್ತರಣೆ(Expansion of Metro), ಸುರಂಗ ಮಾರ್ಗ ಯೋಜನೆಗಳಿಗೆ ಹೆಚ್ಚಿನ ಅನುದಾನವನ್ನು ಘೋಷಿಸಲಾಗಿದೆ. ಬಜೆಟ್ ಮಂಡನೆಯು ರಾಹುಕಾಲಕ್ಕೂ ಮುನ್ನ ನಡೆಯಿತು. ಬಜೆಟ್ ಮಂಡನೆಯ ಮುನ್ನ, ಸಚಿವ ಸಂಪುಟ ಸಭೆ ನಡೆಸಿ ಬಜೆಟ್‌ಗೆ ಅನುಮೋದನೆ ಪಡೆಯಲಾಯಿತು.