ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ( B.S Yadiyurappa ) ಲಿಂಗಾಯತ ಅಲ್ಲ ಎಂಬ ಹೇಳಿಕೆ ನೀಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ( Basangowda Patil Yathnal ) ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ( BY Vijayendra ) ತಿರುಗೇಟು ನೀಡಿದ್ದಾರೆ..

ಯಡಿಯೂರಪ್ಪ ( BS Yadiyurappa ) ನವರು ನಾಡಿನ ಎಲ್ಲ ಸಮುದಾಯವನ್ನು ವಿಶ್ವಾಸ ಗಳಿಸಿದ್ದಾರೆ. ಯಡಿಯೂರಪ್ಪ ರಲ್ರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಅವ್ರು ಎಲ್ಲ ಸಮುದಾಯದ ಧ್ವನಿಯಾಗಿ ಹೋರಾಡಿದ್ದಾರೆ. ಯಡಿಯೂರಪ್ಪರನ್ನ ಟೀಕಿಸಿ ರಾಜಕೀಯದಲ್ಲಿ ಬೆಳೆಯುವ ಭ್ರಮೆಯಲ್ಲಿದ್ದಾರೆ.. ಯಾರ್ಯಾರು ಜಾತಿ ಹೆಸರಲ್ಲಿ ರಾಜಕಾರಣ ಮಾಡ್ತಿದ್ದಾರೋ, ಅವ್ರೆಲ್ಲಾ ಮಾಜಿ ಶಾಸಕರು, ಮಾಜಿ ಸಚಿವರಾಗಿದ್ದಾರೆ. ಅಂತಾ ಹೇಳಿದ್ದಾರೆ..

ನಿನ್ನೆ ಮಾಜಿ ಸಿಎಂ ಯಡಿಯೂರಪ್ಪ ( BS Yadiyurappa ) ಲಿಂಗಾಯತರೇ ಅಲ್ಲ. ಅವರು ಬಳೆಗಾರ ಶೆಟ್ಟರು. ಅವರ ಹುಟ್ಟೂರಾದ ಮಂಡ್ಯದ ಬೂಕನಕೆರೆಗೆ ಹೋಗಿ ಕೇಳಿದರೆ, ನಿಜ ಗೊತ್ತಾಗುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ( MLA Basana gowda Patil Yathnal ) ಹೇಳಿಕೆ ನೀಡಿದ್ರು.. ಸುದ್ದಿಗಾರರ ಜತೆ ಮಾತನಾಡಿದ ಅವರು, ವೀರೇಂದ್ರ ಪಾಟೀಲ, ( Virendra Patil ) ಜೆ.ಎಚ್.ಪಟೇಲ್ ( JH Patil ) ನಂತರ ಸಮುದಾಯದಲ್ಲಿ ಯಾರೂ ನಾಯಕರು ಇರಲಿಲ್ಲ. ಜನರು ಅನಿವಾರ್ಯವಾಗಿ ಯಡಿಯೂರಪ್ಪ ಅವರನ್ನು ಒಪ್ಪಿದರು. ಆದರೆ ಅವರು ವೀರಶೈವರು ಮತ್ತು ಪಂಚಮಸಾಲಿಗಳಿಗೆ ಮೀಸಲಾತಿ ನೀಡದೆ, ಮೋಸ ಮಾಡಿದರು ಎಂದರು.

ಯಡಿಯೂರಪ್ಪ ಲಿಂಗಾಯತರ ಹೆಸರಿನಲ್ಲಿ ಬಿಜೆಪಿಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಶಾಮನೂರು ಶಿವಶಂಕರಪ್ಪ ( Shamanuru shivashnkarappa ) ಕಾಂಗ್ರೆಸ್ ( Congrees ) ಅನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ನಮ್ಮ ಆಕ್ಷೇಪ ಇರುವುದು ಕುಟುಂಬ ರಾಜಕಾರಣದ ಬಗ್ಗೆ ಮಾತ್ರ. ನರೇಂದ್ರ ಮೋದಿ ಸಹ ಕುಟುಂಬ ರಾಜಕಾರಣ ಒಪ್ಪುವುದಿಲ್ಲ ಎಂದರು.