ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ (Uttar Pradesh Prayag Raj) ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಮೊನ್ನೆಯಷ್ಟೆ 300 ಕಿಲೋಮೀಟರ್ ವರೆಗೆ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೈರಲ್ ಆಗಿತ್ತು. ಇದರ ಜೊತೆ ಜೊತೆಗೆ ಸ್ಯಾಂಡಲ್ವುಡ್ನ ಖ್ಯಾತ ಹಾಸ್ಯ ನಟ ತುಕಾಲಿ ಸಂತು (Tukali Santhosh) ಹಾಗೂ ಅವರ ಪತ್ನಿ ಮಾನಸಾ ತುಕಾಲಿ (Manasa Tukali) ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡು ಅಳುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ.

ವೀಡಿಯೊದಲ್ಲಿ ಜನರು ಕಾರನ್ನು ಸುತ್ತುವರೆದಿದ್ದು, ದಂಪತಿಗಳ ಮೇಲೆ ಕೂಗಾಡುತ್ತಿರುವುದು ಕಂಡುಬಂದಿದೆ . ಈ ವೀಡಿಯೊಕ್ಕೆ ‘ಪ್ರಯಾಗರಾಜ್ ಮಹಾ ಕುಂಭದಲ್ಲಿ (Prayag Raj Kumbamela) ಸಿಲುಕಿರುವ ಜನರು ಅಳುತ್ತಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

ಇನ್ನು ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ (News Meter) ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಮಹಾಕುಂಭಕ್ಕೂ ಈ ವೀಡಿಯೊಕ್ಕು ಯಾವುದೇ ಸಂಬಂಧವಿಲ್ಲ.

ಬಿಗ್ ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆ (Big Boss -11 Finale) ಮುಗಿದ ಬಳಿಕ ತುಕಾಲಿ ಸಂತು ಹಾಗೂ ಅವರ ಪತ್ನಿ ಸೆಟ್ನಿಂದ ಮನೆಗೆ ತೆರಳುತ್ತಿರುವ ವೇಳೆ ಅವರ ಅಭಿಮಾನಿಗಳು ಕಾರಿಗೆ ಸುತ್ತುವರಿದ ವೀಡಿಯೊ ಇದಾಗಿದೆ.

ವೈರಲ್ ಆಗುತ್ತಿರುವ ವೀಡಿಯೊದಲ್ಲಿ (Viral TV) ಸುಮನ್ ಟಿವಿ (Suman TV) ಎಂದು ಬರೆದಿರುವುದು ವಾಟರ್ಮಾರ್ಕ್ ಮತ್ತು ಲೋಗೋ ಇರುವುದನ್ನು (water mark and logo) ನಾವು ಗಮನಿಸಿದ್ದೇವೆ. ಜನವರಿ 27, 2025 ರಂದು ಇದೇ ವೀಡಿಯೊವನ್ನು ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಹಂಚಿಕೊಂಡಿರುವುದು ಕಂಡುಕೊಂಡಿದೆ. ಶೀರ್ಷಿಕೆಯಲ್ಲಿ ‘#thukalisantosh’ ಎಂಬ ಹ್ಯಾಶ್ಟ್ಯಾಗ್ ಅನ್ನು ಉಲ್ಲೇಖಿಸಲಾಗಿದೆ.
ಈ Fact Check ಅನ್ನು NEWS METER ರವರು ಪ್ರಕಟಿಸಿದ್ದಾರೆ ಮತ್ತು ಶಕ್ತಿ ಕಲೆಕ್ಟೀವ್ ನ ಭಾಗವಾಗಿ NEWS METER ರವರಿಂದ ಮರುಪ್ರಕಟಿಸಲಾಗಿದೆ.