ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ (BY Vijayendra) ಚಿಕ್ಕಮಗಳೂರಿಗೆ (Chikkamaglore) ಭೇಟಿ ನೀಡಿದ್ದರು. ಈ ವೇಳೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಂದ ವಿಜಯೇಂದ್ರಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಹೋ ಮಳೆ ಸುರಿಸಿ ವಿಜಯೇಂದ್ರರನ್ನು ಬರಮಾಡಿಕೊಳ್ಳಲಾಯ್ತು.

ಬಿ.ವೈ ವಿಜಯೇಂದ್ರ ಚಿಕ್ಕಮಗಳೂರು ನಗರದ ಹಿರೇಮಗಳೂರು ವೃತ್ತದ ಬಳಿ ಆಗಮಿಸುತ್ತಿದ್ದಂತೆ ಅವರಿಗೆ ಪುಷ್ಪ ವೃಷ್ಟಿಯ ಭವ್ಯ ಸ್ವಾಗತ ಕೋರಲಾಗಿದೆ. ಈ ವೇಳೆ ವಿಧಾನ ಪರಿಷತ್ ಸದಸ್ಯ, ಬಿಜೆಪಿ ಮುಖಂಡ ಸಿ.ಟಿ.ರವಿವಿಜಯೇಂದ್ರಗೆ ಸ್ವಾಗತ ಕೋರಿದ್ದಾರೆ.
ಚಿಕ್ಕಮಗಳೂರಿನ ಬಸವಪೀಠದ ನೂತನ ಕಟ್ಟಡ ಉದ್ಘಾಟನೆಗೆ ವಿಜಯೇಂದ್ರ ಆಗಮಿಸಿದ್ದರು. ನಗರದ ಬೈಪಾಸ್ ರಸ್ತೆಯಲ್ಲಿ ನಿರ್ಮಾಣವಾಗಿರೋ ಬೃಹತ್ ಕಟ್ಟಡ ಇದಾಗಿದ್ದು ಇಂದು ಉದ್ಘಾಟನೆಯಾಗಿದೆ.

ಈ ಹಿಂದೆ ಬಿ.ಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ನಾಯಕತ್ವದ ವಿರುದ್ಧ ಪರೋಕ್ಷವಾಗಿ ಸಿಟಿ ರವಿ ಅಸಮಾಧಾನಗೊಂಡಿದ್ದರು ಎಂಬ ಚರ್ಚೆಗಳು ಕಾವೇರಿತ್ತು. ಆದ್ರೆ ಈಗ ಚಿಕ್ಕಮಗಳೂರಿನಲ್ಲಿ ವಿಜಯೇಂದ್ರಗೆ ಸಿಕ್ಕ ಸ್ವಾಗತ ನೋಡಿ ಎಲ್ಲಾವೂ ತಣ್ಣಗಾಗಿದ್ಯಾ ಎಂಬ ಚರ್ಚೆಗಳು ಶುರುವಾಗಿದೆ.