ನನಗೆ ರಾಜ್ಯ ಸರ್ಕಾರದ ಬಗ್ಗೆ ಮಾತಾಡೋಕೆ ಅಸಹ್ಯವಾಗುತ್ತೆ ಅಂತ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಈ ಸರ್ಕಾರ ನಡೆಯುತ್ತಿರುವ ಮಾರ್ಗ ನೋಡಿದಾಗ ಇವರು ಎಲ್ಲವನ್ನೂ ಬಿಟ್ಟಿರಿರುವಂತವರು ಎಂದೆನಿಸುತ್ತಿದೆ ಎಂದು ಹೇಳಿದ್ದಾರೆ.

ಇವತ್ತು ಅತ್ಯತ್ತಮ ರಾಜ್ಯ ಈ ರೀತಿಯ ಹೀನಾಯ ಪರಿಸ್ಥಿತಿಗೆ ತರುವ ವಾತಾವರಣವನ್ನು ಕಾಂಗ್ರೆಸ್ ನಿರ್ಮಾಣ ಮಾಡಿದ್ದಾರೆ. ನಾವು ಕಲ್ಲು ಎಸೆದರೇ ಕಲ್ಲು ನಮ್ಮ ಮೇಲೆ ಬಿಳುತ್ತೆ ಎಂಬ ಗಾದೆ ಮಾತು ಇದೆಯಲ್ಲ ಆ ರೀತಿಯ ಸರ್ಕಾರ ಇದು ಎಂದಿದ್ದಾರೆ.
ಹೀಗಾಗಿ ರಾಜ್ಯದ ಜನರನ್ನು ದೇವರೆ ಕಾಪಾಡಬೇಕು ಎಂದು ಹೆಚ್ಡಿಕೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗೃಹ ಜ್ಯೋತಿ ಹಣವನ್ನ ಗ್ರಾಹಕರಿಂದ ವಸೂಲಿಗೆ ಪ್ರಸ್ತಾವನೆ ವಿಚಾರದ ಬಗ್ಗೆ ಮಾತನಾಡಿದ ಅವರು,ಇನ್ನು ಯಾವ ಯಾವ ತರ ಗ್ಯಾರಂಟಿ ಸ್ಕೀಮ್ಗಳು ಜನ ಸಾಮಾನ್ಯರ ಮೇಲೆ ಹೊರೆ ಆಗುತ್ತೆ ಕಾದು ನೋಡೋಣ ಎಂದಿದ್ದಾರೆ.