
ಭಾರತೀಯರಾದ ಕಾಶ್ ಪಟೇಲ್ ನಿನ್ನೆ(ಫೆ 22) ‘FBI’ನ ಒಂಬತ್ತನೇ ನಿರ್ದೇಶಕರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ವೇಳೆ ಅವರು ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿ ಅಧಿಕಾರ ಮತ್ತು ಗೌಪ್ಯತೆಯನ್ನು ಸ್ವೀಕರ ಮಾಡಿದ್ದಾರೆ. ಕಾಶ್ ಪಟೇಲ್ ಭಾರತದ ಗುಜರಾತ್ ಮೂಲದವರಾಗಿದ್ದು ಈಗ FBI ಮುಖ್ಯಸ್ಥರಾಗಿದ್ದಾರೆ .ಈ ವೇಳೆ ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿ ಎಫ್ ಬಿಐ ಡೈರೆಕ್ಟರ್ ಆಗಿ ಅಧಿಕಾರ ಸ್ವೀಕಾರ ಮಾಡಿದ್ದು ಗಮನಾರ್ಹವಾಗಿದೆ.

ಎಫ್.ಬಿ.ಐ. ಅಮೆರಿಕಾದ ಅತ್ಯುನ್ನತ ತನಿಖಾ ಸಂಸ್ಥೆಯಾಗಿದೆ.ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ತನಿಖಾ ಸಂಸ್ಥೆಯ ಮುಖ್ಯಸ್ಥನಾಗಿ ಕಾಶ್ ಪಟೇಲ್ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಎಫ್ಬಿಐನಲ್ಲಿ ತಮ್ಮ ಜವಾಬ್ದಾರಿಯನ್ನು ಬದ್ಧತೆಯಿಂದ ನಿರ್ವಹಿಸಿಕೊಂಡು ಹೋಗುವುದಾಗಿ ಕಾಶ್ ಪಟೇಲ್ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿ ಕಾಶ್ ಪಟೇಲ್ , ನಾನು ಅಮೆರಿಕದ ಕನಸಿನೊಂದಿಗೆ ಜೀವಿಸುತ್ತಿದ್ದೇನೆ. ಅಮೆರಿಕದ ಕನಸು ಸತ್ತಿದೆ ಎಂದು ಭಾವಿಸುವವರು,ನೀವು ಭೂಮಿಯ ಮೇಲಿನ ಶ್ರೇಷ್ಠ ರಾಷ್ಟ್ರದ ಕಾನೂನು ಜಾರಿ ಸಂಸ್ಥೆ FBI ಮುನ್ನಡೆಸಲಿರುವ ಮೊದಲ ತಲೆಮಾರಿನ ಭಾರತೀಯರೊಂದಿಗೆ ಮಾತನಾಡುತ್ತಿದ್ದೀರಿ ಎಂದು ಹೇಳಿದ್ದಾರೆ.