ಬೆಂಗಳೂರಿನ ಟ್ರಾಫಿಕ್ (Bengaluru traffic) ಸಮಸ್ಯೆ ನಿವಾರಣೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ (Dk Shivakumar) ಆದಿರುವ ಮಾತುಗಳು ಟೀಕೆ ಮತ್ತು ಆಕ್ರೋಶಕ್ಕೆ ಗುರಿಯಾಗಿದೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಗ್ಗೆ ಖುದ್ದು ಡಿಸಿಎಂ ಡಿಕೆಶಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ದೇವರೇ ಬಂದರೂ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಪರಿಹರಿಸಲಾಗಲ್ಲ. ಆ ದೇವರು ಕೂಡ ಒಂದು, ಎರಡು, ಮೂರು ವರ್ಷದಲ್ಲಿ ಟ್ರಾಫಿಕ್ ಸಮಸ್ಯೆಗೆ ಏನೂ ಮಾಡಲಾಗಲ್ಲ ಎಂದು ಡಿಕೆ ಶಿವಕುಮಾರ್ ಹೇಳುದ್ದಾರೆ. ಡಿಸಿಎಂ ಡಿಕೆಶಿ ಈ ಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದು, ಇದು ನಾಯಕತ್ವದ ವೈಫಲ್ಯ ಎಂದ ಉದ್ಯಮಿ ಮೋಹನ್ ದಾಸ್ ಪೈ ಕಿಡಿಕಾರಿದ್ದಾರೆ.

ಡಿಕೆ ಶಿವಕುಮಾರ್ ದಯವಿಟ್ಟು ಕ್ರಮ ಕೈಗೊಂಡು, ಸಮಸ್ಯೆ ಪರಿಹರಿಸಿ. ದೇವರು ಇನ್ನೂ ಬೆಂಗಳೂರು ಅನ್ನು ಕೈ ಬಿಟ್ಟಿಲ್ಲ.ಆದರೆ ಬಹುಶಃ ನಮ್ಮ ಸಚಿವರು ಬೆಂಗಳೂರು ಸಮಸ್ಯೆ ಪರಿಹರಿಸಲಾಗದೇ ಕೈ ಚೆಲ್ಲಿದ್ದಾರೆ.ಇದು ವೈಫಲ್ಯವನ್ನು ಒಪ್ಪಿಕೊಂಡ ಶಾಕಿಂಗ್ ಸತ್ಯ ಅಂತ ಮೋಹನ್ ದಾಸ್ ಪೈ ಟ್ವೀಟ್ ಮೂಲಕ ಡಿಕೆಶಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.