
ಮುಡಾ ಹಗರಣ ಪ್ರಕರಣ ಸಂಬಂಧ ಲೋಕಾಯುಕ್ತ ಕೋರ್ಟ್ಗೆ ಬಿ. ರಿಪೋರ್ಟ್ ಸಲ್ಲಿಕೆ ಬೆನ್ನೆಲ್ಲೇ ಇ.ಡಿ ಅಲರ್ಟ್ ಆಗಿದ್ದು, ಮುಡಾ ಅಧಿಕಾರಿಗಳು ದಾಖಲೆ ಸಮೇತ ಹಾಜರಾಗುವಂತೆ ಬುಲಾವ್ ನೀಡಿದೆ. ಮುಡಾ ಕಮಿಷನರ್ ರಘುನಂದನ್, ನಗರ ಯೋಜನಾ ಸದಸ್ಯ ಶಿವರಾಮಯ್ಯ, ಕಾರ್ಯದರ್ಶಿ ಪ್ರಸನ್ನ ಕುಮಾರ್ ಹಾಜರಾಗಿದ್ದಾರೆ. ಇನ್ನು ಮುಖ್ಯ ಲೆಕ್ಕ ಅಧಿಕಾರಿ ಮಂಜುಳಾ ವಿಚಾರಣೆಗೆ ಹಾಜರಾಗಿ ತೆರಳಿದ್ದು, ಮತ್ತೆ ಮಧ್ಯಾಹ್ನದ ನಂತರ ಬರಲು ಹೇಳಿದ್ದಾರೆಂದು ಹೊರಟಿದ್ದಾರೆ. .
ಸಿಎಂ ಸಿದ್ದರಾಮಯ್ಯಗೆ ಮುಡಾ ಕೇಸ್ನಲ್ಲಿ ಕ್ಲೀನ್ ಚೀಟ್ ವಿಚಾರದ ಬಗ್ಗೆ ದಾವಣಗೆರೆಯಲ್ಲಿ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದಾರೆ. ನ್ಯಾಯಾಂಗದ ಮೇಲೆ ನಂಬಿಕೆ ಇತ್ತು. ಕ್ಲೀನ್ ಚೀಟ್ ಸಿಕ್ಕಿದ್ದು, ಸಂತೋಷವಾಗಿದೆ. ಇದರಿಂದಲೇ ತಿಳಿಯುತ್ತೆ ಬಿಜೆಪಿ ಯಾವ ರೀತಿ ಸಂಚು ಮಾಡಿತ್ತು ಅಂತ. ಹಿಂದುಳಿದ ಒಬ್ಬ ಪ್ರಾಮಾಣಿಕ ನಾಯಕನಿಗೆ ಕಪ್ಪು ಚುಕ್ಕೆ ತರಲು ಪ್ರಯತ್ನಿಸಿದ್ರು ಆದ್ರೆ ಅದು ಆಗಲಿಲ್ಲ ಎಂದಿದ್ದಾರೆ.

ಮುಡಾ ಕೇಸ್ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿದ ಸಚಿವ ಬೈರತಿ ಸುರೇಶ್, ನಾನಾಗಲಿ, ಸಿಎಂ ಆಗಲಿ.. ಸಿಎಂ ಪತ್ನಿ ಆಗಲಿ ಹೆದರುವ ಪ್ರಶ್ನೆಯೇ ಇಲ್ಲ. ನಾವು ಯಾವುದೇ ತಪ್ಪು ಮಾಡಿಲ್ಲ. ಭಯ ಪಡುವ ಅಗತ್ಯವಿಲ್ಲ. ಮುಡಾ ಕಡತಗಳನ್ನು ನಾನು ತೆಗೆದುಕೊಂಡು ಹೋಗಿಲ್ಲ ಎಂದಸಿದ್ದಾರೆ. ಅದೇನು ಕಡಲೆ ಪುರಿ ಅಲ್ಲ. ಫೈಲ್ ತೆಗೆದುಕೊಂಡು ಹೋಗೋದು ಅಷ್ಟು ಸುಲಭ ಅಲ್ಲ. ಬಿಜೆಪಿಯವರು ಆರೋಪ ಮಾಡ್ತಿದ್ದರಲ್ಲ. ಅವರನ್ನೇ ಯಾವ ಫೈಲ್ ಕೇಳಿ ಅಂತ ಎಂದು ಕಿಡಿಕಾರಿದ್ದಾರೆ.

ಮೈಸೂರಲ್ಲಿ ಸಿದ್ದರಾಮಯ್ಯ ಅಭಿಮಾನಿ ಹರಕೆ ಸಲ್ಲಿಕೆ. ಕರ್ನಾಟಕ ರಾಜ್ಯ ಸಿದ್ದರಾಮಯ್ಯ ಬ್ರಿಗೇಡ್ ಕಾರ್ಯದರ್ಶಿ ಚಾಮುಂಡಿ ದೇವಿಗೆ ಹರಕೆ ಸಲ್ಲಿಸಿದ್ದಾರೆ. ನಾಡ ಅಧಿದೇವತೆಗೆ ಈಡುಗಾಯಿ ಒಡೆದು, ಉರುಳು ಸೇವೆ ಮಾಡಿದ್ದಾರೆ. ಬರಿಗಾಲಿನಲ್ಲಿ ಬೆಟ್ಟದಲ್ಲಿ ನಡೆದಾಡಿ ಹರಕೆ ಸಲ್ಲಿಸಿದ್ದಾರೆ. ಲೋಕಾಯುಕ್ತದಲ್ಲಿ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ಸಿಕ್ಕ ಹಿನ್ನೆಲೆಯಲ್ಲಿ ಹಾಗು ಪ್ರಕರಣ ಸಿಬಿಐಗೆ ವರ್ಗಾವಣೆಯಾಗದ ಕಾರಣಕ್ಕೆ ಹರಕೆ ತಿರಿಸಿದ್ದಾರೆರ. ಕಳಂಕದಿಂದ ಮುಕ್ತರಾಗಲಿ ಎಂದು ಹರಕೆ ಕಟ್ಟಿಕೊಂಡಿದ್ದೆ, ಈಗ ಸಿಎಂ ತಪ್ಪಿಲ್ಲ ಎಂದು ಲೋಕಾಯುಕ್ತ ಹೇಳಿದೆ ಎಂದು ಕಾಂಗ್ರೆಸ್ ಮುಖಂಡ ಮೈಸೂರು ಬಸವಣ್ಣ ಹೇಳಿದ್ದಾರೆ.
