ಕನ್ನಡಪರ ಹೋರಾಟಗಾರನ ಮೇಲೆ ಬೆಳಗಾವಿ ಪೊಲೀಸರು (Belagavi police) ರೌಡಿ ಶೀಟ್ (Rowdy sheet) ಓಪನ್ ಮಾಡಿದ್ದಾರೆ. ಹೌದು ಬೆಳಗಾವಿಯಲ್ಲಿ ಕನ್ನಡಪರ ಹೋರಾಟ ಮಾಡಿದ ಕನ್ನಡಿಗನ ಮೇಲೆ ರೌಡಿಶೀಟ್ ಓಪನ್ ಆಗಿದೆ.

ಕಳೆದ 2021ರ ಚಳಿಗಾಲದ ಅಧಿವೇಶನ ಪ್ರತಿಯಾಗಿ ಮಹಾಮೇಳಾವ್ ನಡೆಸಲು ಮುಂದಾಗಿದ್ದ ಎಂಇಎಸ್ (MES) ಮುಖಂಡ ದೀಪಕ್ ದಳವಿಗೆ (Deepak dalavi) ಅನಿಲ್ ದಡ್ಡಿಮನಿ (Anil daddamani) ಕಪ್ಪು ಮಸಿ ಬಳಿದಿದ್ರು.
ಇದೇ ಕಾರಣಕ್ಕೆ ನನ್ನ ಮೇಲೆ ರೌಡಿಶೀಟ್ ಓಪನ್ ಮಾಡಿದ್ದಾರೆ ಅಂತ ಅನಿಲ್ ದಡ್ಡಿಮನಿ ಆರೋಪ ಮಾಡಿದ್ರು. ಆದ್ರೆ ಇತ್ತೀಚೆಗೆ ಕನ್ನಡಪರ ಹೋರಾಟಗಾರರ ಮೇಲಿನ ಕೇಸ್ ವಾಪಸ್ ಪಡೆದುಕೊಳ್ಳಬೇಕೆಂದು ಸಿಎಂ ಸಿದ್ದರಾಮಯ್ಯ ಕೂಡ ಸೂಚನೆ ಕೊಟ್ಟಿದ್ರು.
ಆದ್ರೆ, ಸಿದ್ದರಾಮಯ್ಯರ ಆದೇಶವನ್ನೂ ಪಾಲಿಸದೆ ಪೊಲೀಸರು ಕೇಸ್ ವಾಪಸ್ ತೆಗೆದುಕೊಂಡಿಲ್ಲ.ಹಾಗಾಗಿ ಕೇಸ್ ವಾಪಸ್ ಪಡೆದುಕೊಳ್ಳಬೇಕೆಂದು ಕನ್ನಡಪರ ಹೋರಾಟಗಾರ ಅನಿಲ್ ದಡ್ಡಿಮನಿ ಒತ್ತಾಯ ಮಾಡಿದ್ದಾರೆ.