ರಾಜ್ಯದಲ್ಲಿ ಸಂಪುಟ (Cabinet) ಸರ್ಜರಿ ಕೊನೆಗೂ ಕಾಂಗ್ರೆಸ್ ಹೈ ಕಮಾಂಡ್ (Congress highcommand) ಮನಸ್ಸು ಮಾಡಿದಂತೆ ಕಾಣುತ್ತಿದೆ. ಮುಂದಿನ ಮಾರ್ಚ್ ತಿಂಗಳ ನಂತರ ಸಂಪುಟ ಪುನಾರಚನೆ ಬಹುತೇಕ ಫಿಕ್ಸ್ ಎನ್ನಲಾಗ್ತಿದೆ.

ಈ ಸಂದರ್ಭದಲ್ಲಿ ಪ್ರಸ್ತುತ 5 ರಿಂದ 8 ಮಂದಿ ಸಚಿವರ ರಾಜೀನಾಮೆ ಪಡೆಯುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿದೆ. ಆದ್ರೆ ಯಾವೆಲ್ಲ ಸಚಿವರ ತಲೆದಂಡವಾಗಲಿದೆ ಎಂಬುದು ಕೆಲ ಸಚಿವರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಇದಕ್ಕಾಗಿ ಹೈಕಮಾಂಡ್ ಕೆಲವು ಮಾನದಂಡಗಳನ್ನು ಸಿದ್ಧಪಡಿಸಿದ್ದು, ಲೋಕಸಭಾ ಚುನಾವಣೆ ಫಲಿತಾಂಶವನ್ನ ಗಣನೆಗೆ ತೆಗೆದುಕೊಂಡು ಮತ್ತೆ ಪ್ರದೇಶವಾರು, ಜಾತಿವಾರು ಅಧಾರದ ಮೇಲೆ ಸಂಪುಟ ಪುನಾರಚನೆ ಮಾಡುವ ಸಾಧ್ಯತೆಯಿದೆ.

ಈ ಬಗ್ಗೆ ಸಿಎಂ ಸಿದ್ದರಾಮಯ್ಯಗೂ ಹೈಕಮಾಂಡ್ ಮಾಹಿತಿ ರವಾನೆ ಮಾಡಿದೆ ಎನ್ನಲಾಗಿದೆ. ಇನ್ನು ಸಚಿವರ ಕಾರ್ಯ ವೈಖರಿ ಬಗ್ಗೆ ಶಾಸಕರೂ ಕೂಡ ಅಸಮಾಧಾನ ವ್ಯಕ್ತಪಡಿಸಿದ್ರು. ಹೀಗಾಗಿ ಸರ್ಕಾರ ಹಾಗೂ ಪಕ್ಷದ ಇಮೇಜ್ ಹೆಚ್ಚಿಸಲು ಕೆಲ ಸಚಿವರು ವಿಫಲರಾಗಿದ್ದು, ಮಂತ್ರಿಗಿರಿ ಕಳೆದುಕೊಳ್ಳುವ ಸಚಿವರು ಯಾರು ಎಂಬ ಕುತೂಹಲ ಹೆಚ್ಚಾಗಿದೆ.