ನಿರ್ದೇಶಕ ಗುರು ಪ್ರಸಾದ್ (Director guruprasad) ಅವರ ಕೊನೆಯ ಸಿನಿಮಾ ಎದ್ದೇಳು ಮಂಜುನಾಥ -2 ಗುರು ಪ್ರಸಾದ್ ನಟಿಸಿ ನಿರ್ದೇಶಿಸಿರೋ ಸಿನಿಮಾಗೆ ಅವರ ಪತ್ನಿಯಿಂದಲೇ ಸಂಕಷ್ಟ ಎದುರಾಗಿದೆ. ಹೀಗಾಗಿ ಗುರು ಪ್ರಸಾದ್ ಪತ್ನಿ ನಡೆಗೆ ನಿರ್ಮಾಪಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿರ್ದೇಶಕ ಗುರು ಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡು ಕೊನೆಯುಸಿರೆಳೆದ್ರೂ, ಅವರ ಕೊನೆಯ ಸಿನಿಮಾ ಮೂಲಕ ಗೌರವ ಸಲ್ಲಿಸೋಕೆ ಆಗಿಲ್ಲ.ಅಂದುಕೊಂಡಂತಾಗಿದ್ರೆ ಅದ್ದೂರಿಯಾಗಿ ಕೊನೆಯ ಸಿನಿಮಾ ಗುರುಪ್ರಸಾದ್ ಗೆ ಗೌರವ ಕೊಡುವಂತೆ ರಿಲೀಸ್ ಮಾಡಬೇಕಿತ್ತು.ಆದ್ರೆ ಗುರುಪ್ರಸಾದ್ ಎರಡನೇ ಪತ್ನಿ ಹಾಗೆ ನಿರ್ಮಾಪಕರ ನಡುವಿನ ಕಿತ್ತಾಟದಿಂದ ಈಗ ಸಿನಿಮಾ ರಿಲೀಸ್ ಗೆ ಕೋರ್ಟ್ ತಡೆಯಾಗ್ನೆ ನೀಡಿದೆ.

ಇದಕ್ಕೆ ಕಾರಣ ಅಂದ್ರೆ, ಗುರುಪ್ರಸಾದ್ ಅವರ ಎರಡನೇ ಪತ್ನಿ ಸುಮಿತ್ರ ಸಿನಿಮಾದ ನಿರ್ಮಾಪಕರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ರಂತೆ.ಸಿನಿಮಾದ ಹಕ್ಕನ್ನ ಮೊದಲು ಮೈಸೂರ್ ರಮೇಶ್ ಅವರಿಗೆ ಬರೆದುಕೊಟ್ಡಿದ್ರು. ಆ ನಂತರ ಸುಮಿತ್ರಾ ಅವರು ಕೋರ್ಟ್ ಮೆಟ್ಟಿಲೇರಿ ತಡೆಯಾಹ್ನೆ ತಂದಿದ್ದಾರೆ.
ಆದರೆ ಇಂದು ನಿರ್ಮಾಪಕರಾದ ರವಿದೀಕ್ಷಿತ್, ಮೈಸೂರ್ ರಮೇಶ್ ಕೂಡ ಕೋರ್ಟ್ ಮೆಟ್ಡಿಲೇರಿ ನಾಳೆ ರಿಲೀಸ್ ಮಾಡೋ ಪ್ರಯತ್ನಕ್ಕೆ ಮುಂದಾಗಿದ್ದಾರೆ.