ತಮ್ಮ ಎರಡು ದಿನಗಳ ದೆಹಲಿ ಭೇಟಿ (Delhi) ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ (Parameshwar) ಪ್ರತಿಕ್ರಿಯಿಸಿದ್ದಾರೆ. ನಾನು ಯಾವುದೇ ಅಜೆಂಡಾ ಇಲ್ಲದೆ ದೆಹಲಿಗೆ ತೆರಳಿದ್ದೆ,ದೆಹಲಿಯ ಪಕ್ಷದ ಹೆಡ್ ಕ್ವಾರ್ಟಸ್ ಗೆ ಭೇಟಿ ನೀಡಿದ್ದೆ.ಆ ವೇಳೆ ಕೆ.ಸಿ ವೇಣುಗೋಪಾಲ್ (KC venugopal) ಸಿಕ್ಕಿದ್ದರು ಅಷ್ಟೇ.ಅಲ್ಲಿ ಯಾವುದೇ ರಾಜಕೀಯ ವಿಚಾರಗಳನ್ನು ಚರ್ಚಿಸಿಲ್ಲ ಎಂದು ಹೇಳಿದ್ದಾರೆ.

ಇನ್ನು ಪಕ್ಷದ ನಾಯಕತ್ವ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚಿಸಿಲ್ಲ. ಶೋಷಿತರ ಸಮಾವೇಶದ ಕುರಿತು ಏನೂ ಮಾತನ್ನಾಡಿಲ್ಲ. ಸದ್ಯ ಮಾಧ್ಯಮಗಳಲ್ಲಿ ವ್ಯಾಖ್ಯಾನ ಆಗುತ್ತಿರುವಂತೆ ಚರ್ಚಿಸಿಲ್ಲ ಎಂದಿದ್ದಾರೆ. ನಾನು ಈಗ ಯಾವುದೇ ರಾಜಕೀಯ ವಿಚಾರಗಳಿಗೆ ಉತ್ತರಿಸೋದಿಲ್ಲ ಎಂದಿದ್ದಾರೆ.

ಇನ್ನು ಸಿಎಂ ಸಿದ್ದರಾಮಯ್ಯಗೆ (Cm siddaramaiah) ಲೋಕಾಯುಕ್ತ ಕ್ಲೀನ್ ಚಿಟ್ ನೀಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಬಿಐಗೆ (CBI) ಕೊಡುವ ವಿಚಾರದಲ್ಲಿ ಈಗಾಗಲೇ ಕೋರ್ಟ್ ಆದೇಶ ನೀಡಿದೆ. ಬಿಜೆಪಿಯವರು ಲೋಕಾಯುಕ್ತ ಕ್ಲೀನ್ ಚಿಟ್ (Clean chit) ನೀಡಿರೋದನ್ನ ಪ್ರಶ್ನಿಸುತ್ತಿದ್ದಾರೆ. ಇವರಿಗೆ ಅನುಕೂಲ ಆದಾಗ ಎಲ್ಲವೂ ಸರಿ ಇರುತ್ತೆ,ಇಲ್ಲದಿದ್ದರೆ ಸರಿ ಇರೋದಿಲ್ಲ ಅಂದ್ರೆ ಹೇಗೆ ಎಂದು ಕಿಡಿಕಾರಿದ್ದಾರೆ.