ಮಖಾನ ಅಂದ್ರೆ ಹೆಚ್ಚು ಜನರಿಗೆ ತಿಳಿದಿರುವ ಒಂದು ಪದಾರ್ಥ ಅಂತಾನೆ ಹೇಳಬಹುದು, ಮಖಾನವನ್ನು ಬಳಸಿ ಸಾಕಷ್ಟು ಔಷಧಿಗಳನ್ನ ಕೂಡ ತಯಾರು ಮಾಡುತ್ತಾರೆ.ಇದರಲ್ಲಿ ಇರುವಂತಹ ಅಂಶಗಳು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.ಇದನ್ನ ತಾವರೆ ಹೂವಿನ ಬೀಜ ಅಂತಾನೂ ಕರೆಯುತ್ತಾರೆ. ಇನ್ನು ಮಖಾನದ ರುಚಿ ಸೇಮ್ ಪಾಪ್ಕಾರ್ನ್ ರೀತಿ ಇರುತ್ತದೆ. ತಾವರೆ ಹೂವಿನ ಬೀಜವನ್ನು ಹುರಿದಾಗ ಬಿಳಿಯ ಸ್ಪೋಂಜ್ ರೀತಿಯ ಆಗುತ್ತದೆ. ಇದನ್ನು ಪ್ರತಿದಿನ ಒಂದು ಹಿಡಿಯಷ್ಟು ಮಕ್ಕಳಿಗೆ ನೀಡುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ.

ಹೆಚ್ಚು ಪ್ರೋಟೀನ್
ಮಖಾನದಲ್ಲಿ ಪ್ರೋಟೀನ್ ಅಂಶ ಹೆಚ್ಚಿರುತ್ತದೆ ಪ್ರತಿದಿನ ಮಕ್ಕಳಿಗೆ ಒಂದು ಹಿಡಿಯಷ್ಟು ಮಖಾನದಲ್ಲಿ ನೀಡುವುದರಿಂದ ಮಕ್ಕಳ ಬೆಳವಣಿಗೆಗೆ ಸಹಾಯಕಾರಿಯಾಗುತ್ತದೆ.

ಫೈಬರ್ ಅಂಶ
ಮಖಾನದಲ್ಲಿ ನಾರಿನಂಶ ಹೆಚ್ಚಿರುತ್ತದೆ ಮಕ್ಕಳು ಮಖನವನ್ನ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿ ಆಗುತ್ತದೆ, ಕಾನ್ಸ್ಟಿಪೇಶನ್ ಸಮಸ್ಯೆ ನಿವಾರಣೆ ಆಗುತ್ತದೆ ಹಾಗೂ ಕರುಳಿನ ಚಟುವಟಿಕೆ ಕೂಡ ಉತ್ತಮವಾಗಿರುತ್ತದೆ.
ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ
ಮಖಾನವು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು ಅದು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತದಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಮೂಳೆಯ ಆರೋಗ್ಯ
ಮಖಾನದಲ್ಲಿರುವಂಥ ಮಿನರಲ್ಸ್ ಹಾಗೂ ಕ್ಯಾಲ್ಸಿಯಂ ಅಂಶದಿಂದ ಮೂಳೆಗಳು ಗಟ್ಟಿಯಾಗುತ್ತದೆ..ಹಾಗೂ ಮೂಳೆಗಳ ಬೆಳವಣಿಗೆಗೂ ಕೂಡ ಬೆಸ್ಟ್.