
ಬಿಜೆಪಿಯಲ್ಲಿ ಅಸಮಾಧಾನದ ಬೇಗುದಿ ಕಡಿಮೆಯಾಗುವಂತೆ ಕಾಣ್ತಿಲ್ಲ. ವಿಜಯೇಂದ್ರ ವಿರುದ್ಧ ಸಮರ ಸಾರಿರುವ ಯತ್ನಾಳ್ಗೆ ಬಿಜೆಪಿ ವರಿಷ್ಟರು ನೋಟಿಸ್ ಕೊಟ್ಟಿದ್ದರೂ ಉತ್ತರ ಕೊಟ್ಟಿಲ್ಲ. ಹೈಕಮಾಂಡ್ ನೋಟಿಸ್ಗೂ ಕ್ಯಾರೇ ಎನ್ನದ ಯತ್ನಾಳ್ ವಿಜಯೇಂದ್ರ ವಿರುದ್ಧ ಸಮರ ಮುಂದುವರೆಸಿದ್ದಾರೆ.
ಫೆಬ್ರವರಿ 20ರಂದು ಯತ್ನಾಳ್ ಟೀಂ ಮತ್ತೆ ಸಭೆ ಸೇರಲಿದ್ದು. ಬೆಂಗಳೂರಲ್ಲಿ ರೆಬೆಲ್ಸ್ ಟೀಂ ಸಭೆ ನಡೆಸಲಿದ್ದಾರೆ.. ಸಭೆಯಲ್ಲಿ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಅರವಿಂದ್ ಲಿಂಬಾವಳಿ ಸೇರಿ ಪಕ್ಷದ ಕೆಲ ಬಂಡಾಯ ಪ್ರಮುಖರು ಭಾಗಿಯಾಗಲಿದ್ದಾರೆ. ಈಗಾಗಲೇ ಬಂಡಾಯ ಸಮರದಲ್ಲಿ ಭಿನ್ನರ ಪಡೆಗೆ ಹಿನ್ನೆಡೆಯಾಗಿದ್ದು, ಮುಂದಿನ ಕಾರ್ಯತಂತ್ರದ ಬಗ್ಗೆ ತಂಡ ಸಮಾಲೋಚನೆ ನಡೆಸಲಿದೆ.
ವಿಜಯೇಂದ್ರ ವಿಚಾರದಲ್ಲಿ ಆರ್ ಅಶೋಕ್ ಯಾಮಾರಿದ್ದಾರೆ ಅನ್ನೋ ಅನುಮಾನ ಮೂಡಿದೆ. ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನ ತಪ್ಪಿಸಲು ಹೋಗಿ ತಮ್ಮ ಸ್ಥಾನಕ್ಕೆ ಸಂಚಕಾರ ತಂದುಕೊಂಡಿದ್ದಾರೆ ಅಂತ ಹೇಳಲಾಗ್ತಿದೆ. ಪರೋಕ್ಷವಾಗಿ ವಿಜಯೇಂದ್ರ ವಿರುದ್ಧ ನಿಂತಿದ್ದ ಅಶೋಕ್, ತಮ್ಮ ವಿಪಕ್ಷ ನಾಯಕ ಸ್ಥಾನಕ್ಕೆ ಕುತ್ತು ತಂದುಕೊಂಡಿದ್ದಾರೆ ಎನ್ನಲಾಗ್ತಿದೆ. ನಾವು ತಟಸ್ಥರು ಎನ್ನುತ್ತಲೇ ಅಶೋಕ್ ರೆಬೆಲ್ಸ್ ಪರ ನಿಂತಿದ್ರು. ಈ ಹಿನ್ನೆಲೆಯಲ್ಲಿ ಅಶೋಕ್ ಪಕ್ಷಕ್ಕೆ ಡ್ಯಾಮೇಜ್ ಮಾಡಿದ್ದಾರೆ ಅಂತ ವಿಜಯೇಂದ್ರ ಬಿಜೆಪಿ ಹೈಕಮಾಂಡ್‌ಗೆ ದೂರು ನೀಡಿದ್ದಾರೆ ಎನ್ನಲಾಗ್ತಿದೆ.

ಯತ್ನಾಳ್ ಸಂಧಾನಕ್ಕೆ ಒಪ್ಪುತ್ತಿಲ್ಲ.. ವಿಜಯೇಂದ್ರ ಪಟ್ಟು ಸಡಿಲಿಸ್ತಿಲ್ಲ ಎನ್ನುವಂತಾಗಿದೆ. ಬಿಜೆಪಿ ಹೈಕಮಾಂಡ್‌ಗೆ ಭಿನ್ನಮತ ಕಬ್ಬಿಣದ ಕಡಲೆಯಾಗಿದೆ. ಏನೇ ನಿರ್ಧಾರ ಮಾಡಿದ್ರು ಪಕ್ಷಕ್ಕೆ ಭಾರಿ ಡ್ಯಾಮೇಜ್ ಆಗೋ ಸಾಧ್ಯತೆ ಇದೆ ಅಂತ ರಾಜ್ಯ ಉಸ್ತುವಾರಿ ಟೆನ್ಷನ್ ಆಗಿದ್ದಾರೆ. ಹೈಕಮಾಂಡ್ ನೋಟಿಸ್ ಕೊಟ್ರೂ ಯತ್ನಾಳ್ ಡೋಂಟ್ಕೇರ್ ಅಂತಿದ್ದಾರೆ.

ರಾಜ್ಯ ಬಿಜೆಪಿ ಬಣ ಸಂಘರ್ಷದಿಂದ ಕಂಗೆಟ್ಟಿರುವ ರಾಜ್ಯ ಚುನಾವಣಾ ಉಸ್ತುವಾರಿ ಶಿವರಾಜ್ ಸಿಂಗ್ ಚೌಹಾಣ್ ತಮ್ಮ ಪ್ರವಾಸ ಮುಂದೂಡಿದ್ದಾರೆ. ಬಣ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲು ಉಸ್ತುವಾರಿಗಳು ಟೆನ್ಷನ್ ಮಾಡಿಕೊಂಡಿದ್ದು, ವರಿಷ್ಠರ ಜೊತೆ ಮಾತುಕತೆ ಬಳಿಕ ಚೌಹಾಣ್ ರಾಜ್ಯಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ.