ರಾಜ್ಯ ಕಾಂಗ್ರೆಸ್ (Congress) ಪಾಳಯದಲ್ಲಿ ದಿನೇ ದಿನೇ ಮುಸುಕಿನ ಗುದ್ದಾಟ ಹೆಚ್ಚಾಗುವಂತೆ ಕಾಣುತ್ತಿದೆ. ಹೀಗಾಗಿ ರಾಜಕೀಯ ವಿದ್ಯಮಾನಗಳು ಬಿರುಸುಗೊಳ್ಳುತ್ತಿದೆ. ಈ ಮಧ್ಯೆ ದೆಹಲಿಗೆ ಪ್ರಯಾಣ ಬೆಳೆಸಲು ಗೃಹ ಸಚಿವ ಡಾ.ಜಿ ಪರಮೇಶ್ವರ್ (Dr G Parameshwar) ಅಣಿಯಾಗಿದ್ದಾರೆ.

ಈಗಾಗಲೇ ಸಚಿವ ಸತೀಶ್ ಜಾರಕಿಹೊಳಿ (Satish jarakiholi), ಕೆ.ಎನ್ ರಾಜಣ್ಣ (KN Rajanna) ಬೆನ್ನಲ್ಲೆ ಹೈಕಮಾಂಡ್ ಭೇಟಿಗೆ ಗೃಹ ಸಚಿವ ಪರಮೇಶ್ವರ್ ಮುಂದಾಗಿದ್ದಾರೆ. ಇಂದು ಬೆಳಗ್ಗೆ ೧೦.೨೦ಕ್ಕೆ ದೆಹಲಿಗೆ ಪರಮೇಶ್ವರ್ ಪ್ರಯಾಣ ಬೆಳೆಸಲಿದ್ದು ಇಂದು ದೆಹಲಿಯಲ್ಲೇ ಪರಮೇಶ್ವರ್ ವಾಸ್ತವ್ಯ ಹೂಡಲಿದ್ದಾರೆ.

ಕಳೆದ ತಿಂಗಳು ಡಿನ್ನರ್ ಮೀಟಿಂಗ್ ರದ್ದಾದ ಹಿನ್ನೆಲೆಯಲ್ಲಿ ಡಿಕೆಶಿ ವಿರುದ್ಧ ಪರಮೇಶ್ವರ್ಅಸಮಾಧಾನಗೊಂಡಿದ್ದಾರೆ. ಹೈಕಮಾಂಡ್ ಮೂಲಕ ಡಿನ್ನರ್ ಮೀಟಿಂಗ್ ಗೆ ಡಿಕೆಶಿ ಬ್ರೇಕ್ ಹಾಕಿಸಿದರೆಂಬ ಆಕ್ರೋಶ ಗೃಹಸಚಿವರಲ್ಲಿದೆ.
ಈ ಸಂಬಂಧ ಕೆಲ ದಿನಗಳ ಹಿಂದೆ ಸದಾಶಿವನಗರದಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆಯನ್ನ ಕೂಡ ಪರಮೇಶ್ವರ್ ಭೇಟಿ ಮಾಡಿದ್ದರು.ಡಿಕೆಶಿ ವಿರುದ್ಧ ಸತೀಶ್, ರಾಜಣ್ಣ ಹೈಕಮಾಂಡ್ ಗೆ ದೂರು ನೀಡಿರುವ ಬೆನ್ನಲ್ಲೆ ಈಗ ಪರಮೇಶ್ವರ್ ದೆಹಲಿ ಪ್ರಯಾಣ ಕುತೂಹಲಕ್ಕೆ ಕಾರಣವಾಗಿದೆ.