ಬೆಂಗಳೂರು ದಕ್ಷಿಣ (Bengaluru south) ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejaswi surya) ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸತತ ಎರಡನೆಯ ಬಾರಿಗೆ ಲೋಕ ಸಭಾ ಸದಸ್ಯರಾಗಿ ಆಯ್ಕೆಯಾಗಿರುವ ತೇಜಸ್ವಿ ಸೂರ್ಯ, ಸಿವಾಶ್ರೀ ಸ್ಕಂದಪ್ರಸಾದ್ ಅವರ ಜೊತೆ ಸಪ್ತಪದಿ ತುಳಿಯಲಿದ್ದಾರೆ.

ಮುಂದಿನ ತಿಂಗಳ ಮೊದಲ ವಾರ, ಮಾರ್ಚ್ 5 ಹಾಗೂ 6 ರಂದು ತೇಜಸ್ವಿ ಸೂರ್ಯ ಹಾಗೂ ಸಿವಾಶ್ರೀ ಸ್ಕಂದಪ್ರಸಾದ್ ಮದುವೆ ಸಮಾರಂಭಕ್ಕೆ ದಿನಾಂಕ ನಿಗದಿಯಾಗಿದೆ. ಈ ಮದುವೆಗೆ ಕೇವಲ ಕುಟುಂಬಸ್ಥರು ಹಾಗೂ ಆತ್ಯಾಪ್ತ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆ.

ಬೆಂಗಳೂರಿನ ಕನಕಪುರ ರಸ್ತೆಯ (Kanakapura road) ಖಾಸಗಿ ರೆಸಾರ್ಟ್‌ನಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದ್ದು,ಸಿವಾಶ್ರೀ ಸ್ಕಂದಪ್ರಸಾದ್ ಮೂಲತಃ ತಮಿಳುನಾಡಿನವರು ಎನ್ನಲಾಗಿದೆ. ಇನ್ನು ಸ್ನೇಹಿತರಿಗೆ, ರಾಜಕಾರಣಿಗಳಿಗಾಗಿ ಮಾರ್ಚ್ 9 ರ ಭಾನುವಾರ ಬೆಂಗಳೂರಿನ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.


