ನಮ್ಮ ಸಮಾಜದಲ್ಲಿ ಒಬ್ಬರನ್ನು ಒಬ್ಬರು ತುಳಿಯುವುದು ಎಂದರೆ ಖುಷಿ. ಎಸ್.ಸಿ ಗಳನ್ನು (SC) ತುಳಿದರೆ ಎಸ್.ಟಿ (ST) ಯವರಿಗೆ ಖುಷಿ,ಎಸ್ ಟಿ ಯವರಿಗೆ ತುಳಿದರೆ ಒಬಿಸಿಯವರಿಗೆ ಖುಷಿ. ಒಬಿಸಿಯವರನ್ನ ಇನ್ನೊಬ್ಬರು ತುಳಿದರೆ ಅವರಿಗೆ ಖುಷಿ, ಒಟ್ನಲ್ಲಿ ನನ್ನ ಕೆಳಗೆ ಇನ್ನೊಬ್ಬರಿದ್ದಾರೆ ಎನ್ನುವ ಖುಷಿ ನಮಗೆ. ಆದ್ರೆ ಇದರಿಂದ ನಾವು ಹೊರಬರಬೇಕಿದೆ ಎಂದು ಹೇಳಿದ್ದಾರೆ.

ನಾವೆಲ್ಲ ಒಂದಾಗಿ ಬದುಕಬೇಕು,ಮಹಾ ನಾಯಕರು ನಮಗೆ ಹೋರಾಟದ ದಾರಿ ತೋರಿಸಿದ್ದಾರೆ.ಅನಿಷ್ಟ ಪದ್ದತಿ ಆಚರಣೆಗಳಲ್ಲಿ ಉತ್ತರ ಭಾರತಕ್ಕೆ ಹೋಲಿಸಿದಲ್ಲಿ ನಮ್ಮ ದಕ್ಷಿಣ ಭಾರತ ಉತ್ತಮವಾಗಿದೆ.
ಅಲ್ಲಿ ದಲಿತರು ಮದುವೆ ದಿನ ಕುದುರೆ ಏರುವ ಹಾಗಿಲ್ಲ,ಇಲ್ಲೆಲ್ಲ ಡಿ ಜೆ ಹಚ್ಚುತ್ತೀರ. ಪಂಜಾಬ್ ,ಯುಪಿ,ಬಿಹಾರ ಗಳ ನಂತಹ ರಾಜ್ಯಗಳಲ್ಲಿ ಇಂತಹ ಪರಿಸ್ಥಿತಿ ಇಲ್ಲ ಎಂದಿದ್ದಾರೆ. ಇವೆಲ್ಲದರ ವಿರುದ್ಧ ನಾವು ಹೋರಾಟ ಮಾಡಬೇಕಿದೆ.
ನಾನು ನಾಲ್ಕು ಭಾರಿ ಶಾಸಕನಾಗಿದ್ದರೂ ರಾಹುಕಾಲದಲ್ಲೆ ನಾಮಪತ್ರ ಸಲ್ಲಿಸಿದ್ದು,ಎಲ್ಲ ಪಕ್ಷದವರೂ ಒಳ್ಳೆಯ ಕಾಲದಲ್ಲೆ ನಾಮಪತ್ರ ಸಲ್ಲಿಸುತ್ತಾರೆ.ಆದ್ರೆ ಒಬ್ಬರು ಮಾತ್ರ ಗೆಲ್ಲಲು ಸಾದ್ಯ,ನಾನು ರಾಹುಕಾಲದಲ್ಲಿ ಯಾಕೆ ನಾಮಪತ್ರ ಸಲ್ಲಿಸಿದ್ದು ಅಂದ್ರೆ ನಿಮಗೆಲ್ಲ ಧೈರ್ಯ ಬರಲಿ ಎಂದು ಹೇಳಿದರು.
ನಾವು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಗೌರವ ವಿಶ್ವಾದ್ಯಂತ ಹರಡಬೇಕಿದೆ.ಅದಕ್ಕಾಗಿ ನಾವು ಮತ್ತಷ್ಟು ಹೋರಾಟಗಳನ್ನು ಮಾಡಬೇಕಿದೆ. ಕೋಲಾರದಲ್ಲಿ ಅರಿವು ಭಾರತ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಸಚಿವ ಸತೀಶ್ ಜಾರಕಿಹೊಳಿ ಈ ಬಗ್ಗೆ ಮಾತನಾಡಿದ್ದಾರೆ.





