ಕಳೆದ ಏಳು ತಿಂಗಳಿಂದ ಬೇಸರದಲ್ಲಿದ್ದ ನಟ ದರ್ಶನ್ (Actor darshan) ಅಭಿಮಾನಿಗಳಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case) 100 ದಿನಕ್ಕೂ ಅಧಿಕ ಕಾಲ ಜೈಲಿನಲ್ಲಿದ್ದು ಸದ್ಯ ಜಾಮೀನಿನ ಮೇಲೆ ದರ್ಶನ್ ರಿಲೀಸ್ ಆಗಿದ್ದಾರೆ.

ಇನ್ನೇನು ದರ್ಶನ್ ಹುಟ್ಟುಹಬ್ಬ ಸಮೀಪದಲ್ಲಿದ್ದು, ಅವರ ಹುಟ್ಟುಹಬ್ಬದ ದಿನದಂದು ಅಭಿಮಾನಿಗಳಿಗೆ ‘ಗುಡ್ ನ್ಯೂಸ್ ಕೊಡಲು ದರ್ಶನ್ ಮುಂದಾಗಿದ್ದಾರೆ ಎನ್ನಲಾಗಿದೆ. ತಮ್ಮ ಮುಂದಿನ ಬಹು ನಿರೀಕ್ಷೆಯ ಸಿನಿಮಾ ಡೆವಿಲ್ ಸಿನಿಮಾದ ಟೀಸರ್ (Devil teaser) ಬಿಡುಗಡೆಗೆ ಸಕಲ ತಯಾರಿ ನಡೆಯುತ್ತಿದೆ.

ಇದುವರೆಗೂ ದರ್ಶನ್ ಅಭಿನಯದ ಹಳೆಯ ಸಿನಿಮಾಗಳನ್ನೇ ರೀ ರಿಲೀಸ್ ಮಾಡಲಾಗುತ್ತಿತ್ತು. ಯಾಕಂದ್ರೆ ದರ್ಶನ್ ಜೈಲಿಗೆ ಹೋದ ವೇಳೆ ಡೆವಿಲ್ ಸಿನಿಮಾದ ಚಿತ್ರೀಕರಣ ಆರಂಭವಾಗಿ ಫಸ್ಟ್ ಝಲಕ್ ಕೂಡ ರಿಲೀಸ್ ಆಗಿತ್ತು.
ಇನ್ನೇನು ಫೆ.16ರಂದು ನಟ ದರ್ಶನ್ ಹುಟ್ಟುಹಬ್ಬವಿದ್ದು, ಅಂದೇ ಡೆವಿಲ್ ಸಿನಿಮಾದ ಟೀಸರ್ ಬಿಡುಗಡೆಗೆ ಚಿತ್ರ ತಂಡ ತಯಾರಿ ನಡೆಸುತ್ತಿದೆ.ಇನ್ನು ಡೆವಿಲ್ ಸಿನಿಮಾದ ಹೆಸರನ್ನು ಸಹ ಬದಲಾವಣೆ ಮಾಡಲಾಗಿದೆ. ಈ ಮೊದಲು ‘ಡೆವಿಲ್’ ಎಂಬ ಶೀರ್ಷಿಕೆಯಿತ್ತು. ಅದರ ಜೊತೆಗೆ ‘ದಿ ಹೀರೋ’ ಎಂಬ ಕ್ಯಾಪ್ಶನ್ ಇತ್ತು. ಆದರೆ ಈಗ ‘ದಿ ಡೆವಿಲ್’ ಎಂದಷ್ಟೆ ಬದಲಿಸಿ ದಿ ಹೀರೋ ಎಂಬ ಕ್ಯಾಪ್ಶನ್ ತೆಗೆದು ಹಾಕಲಾಗಿದೆ.