• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕುಮಾರಸ್ವಾಮಿ ಮಾಡಿದ್ದು ಸರೀನಾ..? ಈಗ ಮಾಡಿದ್ದು ತಪ್ಪಲ್ವಾ..?

ಕೃಷ್ಣ ಮಣಿ by ಕೃಷ್ಣ ಮಣಿ
February 15, 2025
in ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ
0
ಕುಮಾರಸ್ವಾಮಿ ಮಾಡಿದ್ದು ಸರೀನಾ..? ಈಗ ಮಾಡಿದ್ದು ತಪ್ಪಲ್ವಾ..?
Share on WhatsAppShare on FacebookShare on Telegram

ADVERTISEMENT

ಕರ್ನಾಟಕ ಸರ್ಕಾರದ ವತಿಯಿಂದ ಆಯೋಜಿಸಿದ್ದ ಇನ್ವೆಸ್ಟ್​ ಕರ್ನಾಟಕದಲ್ಲಿ ಸಾಕಷ್ಟು ಬಿಜೆಪಿ ನಾಯಕರೂ ಸೇರಿದಂತೆ ಹತ್ತು ಹಲವು ಗಣ್ಯರು ಭಾಗಿಯಾಗಿದ್ದರು. ಸುಮಾರು10 ಲಕ್ಷ ಕೋಟಿ ಹೂಡಿಕೆ ಆಗುವ ಮೂಲಕ ಸಾಕಷ್ಟು ಯಶಸ್ಸು ಗಳಿಸಿದೆ. ಆದರೆ ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ ಮಾತ್ರ ಅರಮನೆ ಮೈದಾನದ ಕಡೆಗೆ ಸುಳಿಯಲೇ ಇಲ್ಲ. ಕೇಂದ್ರ ಸಚಿವ ರಾಜನಾಥ್​ ಸಿಂಗ್​, ವಿ ಸೋಮಣ್ಣ, ಶೋಭಾ ಕರಂದ್ಲಾಜೆ ಸೇರಿದಂತೆ ಕಾಂಗ್ರೆಸ್​ ಹೊರತುಪಡಿಸಿದ ಸಾಕಷ್ಟು ನಾಯಕರು ಬಂದಿದ್ದರು. ಆದರೆ ಕುಮಾರಸ್ವಾಮಿ ಮಾತ್ರ ನಾಪತ್ತೆ.

ರಾಜ್ಯ ಸರ್ಕಾರ ನಮ್ಮನ್ನು ಯಾವುದಕ್ಕಾದರೂ ಕರೆದಿದ್ಯಾ..? ನಮ್ಮನ್ನು ಭೇಟಿ ಮಾಡುವ ಕೆಲಸ ಮಾಡಿದ್ಯಾ ಎಂದಿದ್ದರು ಕುಮಾರಸ್ವಾಮಿ. ಆದರೆ ಇನ್ವೆಸ್ಟ್​ ಕರ್ನಾಟಕ 2025 ಕಾರ್ಯಕ್ರಮಕ್ಕೆ ಸ್ವತಃ ಕಾರ್ಯಕ್ರಮದ ರೂವಾರಿಯೂ ಆಗಿದ್ದ ಬೃಹತ್​ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್​ ಆಹ್ವಾನ ನೀಡಿದ್ದರು. ದೆಹಲಿಯ ಕಚೇರಿಯಲ್ಲಿ ಭೇಟಿ ಮಾಡಿ ಕಾರ್ಯಕ್ರಮಕ್ಕೆ ಬರುವಂತೆ ಮನವಿ ಮಾಡಿಕೊಂಡಿದ್ದರು. ಆದರೂ ಕುಮಾರಸ್ವಾಮಿ ಗೈರು ಹಾಜರು. ದೆಹಲಿಯಲ್ಲಿ ಸಾಕಷ್ಟು ಕೆಲಸ ಒತ್ತಡವೆಂದರೆ ಅದೂ ಇಲ್ಲ. ಬೆಂಗಳೂರಿನಲ್ಲೇ ಇದ್ದರು, ಬಂಡವಾಳ ಹೂಡಿಕೆ ಸಮಾವೇಶದ ಕಡೆಗೆ ಬರುವ ಮನಸ್ಸು ಮಾಡಲಿಲ್ಲ.

ಖಾಸಗಿ ಸುದ್ದಿ ವಾಹಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೇಂದ್ರ ಸಚಿವ ಕುಮಾರಸ್ವಾಮಿ, ಕೂಗಳತೆ ದೂರಲ್ಲಿದ್ದ ಅರಮನೆ ಮೈದಾನಕ್ಕೆ ಯಾಕೆ ಬರಲಿಲ್ಲ ಅನ್ನೋದಕ್ಕೆ ಸ್ವತಃ ಕುಮಾರಸ್ವಾಮಿಯೇ ಉತ್ತರ ಕೊಡಬೇಕಿದೆ. ನಮ್ಮನ್ನು ಯಾರು ಕರೆದಿಲ್ಲ, ಇಲ್ಲೀವರೆಗೂ ನಮ್ಮನ್ನು ಯಾರು ಬಂದು ಭೇಟಿ ಮಾಡಿಲ್ಲ ಅನ್ನೋ ಮಾತನ್ನು ಮತ್ತೊಮ್ಮೆ ಉಚ್ಛಾರಣೆ ಮಾಡದಂತೆ ಮಾಡಿಕೊಂಡರು. ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರದ ನಡುವೆ ಸಮನ್ವಯತೆ ಇದ್ದಾಗ ಅಭಿವೃದ್ಧಿ ವೇಗ ಪಡೆಯುತ್ತದೆ. ಆದರೆ ಈ ರೀತಿಯ ಕಾರ್ಯಕ್ರಮಗಳಿಗೆ ಆಹ್ವಾನ ಮಾಡಿದರೂ ಕೇಂದ್ರ ಸಚಿವರು ಗೈರು ಹಾಜರಾದರೆ ಹೊಣೆ ಯಾರು ಎನ್ನುವಂತಾಗಿದೆ.

ಕೇರಳ ಸಂಸದ ಶಶಿ ತರೂರ್ ಭಾಗಿಯಾಗಿ, ಹೂಡಿಕೆ ಸಮಾವೇಶವನ್ನು ಹಾಡಿ ಹೊಗಳಿದ್ರು. ಎಲ್ಲರಿಗೂ ನಮಸ್ಕಾರ ಎಂದು ಮಾತು ಶುರು ಮಾಡಿದ ಶಶಿ ತರೂರ್​, ನನ್ನ ಸ್ನೇಹಿತರಿಗೆ ನಮಸ್ಕಾರ ಎಂದು ಕನ್ನಡದಲ್ಲಿ ಭಾಷಣ ಶುರು ಮಾಡಿದರು. ಆ ಬಳಿಕ ಇನ್ವೆಸ್ಟ್ ಕರ್ನಾಟಕ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ನವೋದ್ಯಮಿಗಳು, ಸ್ಟಾರ್ಟ್ ಅಪ್ ಗಳು, ಸಮಾವೇಶದಲ್ಲಿ ಭಾಗಿಯಾಗಿದ್ರು. ಈ ಸಮಾವೇಶದಲ್ಲಿ ಅನೇಕ ವಿಷಯಗಳ ಬಗ್ಗೆ ಚರ್ಚೆ ಆಗಿದೆ. ಕರ್ನಾಟಕ ಬಂಡವಾಳ ಹೂಡಿಕೆಗೆ ಉತ್ತಮ ಸ್ಥಾನದಲ್ಲಿದೆ ಅಂದ್ರು. ಕರ್ನಾಟಕ ಭಾರತದ ಆರ್ಥಿಕತೆಗೆ ತಮ್ಮದೇ ಕೊಡುಗೆ ನೀಡುತ್ತಿದೆ. ವಿಶ್ವ ಅನೇಕ ಸಮಸ್ಯೆಗಳನ್ನ ಎದುರಿಸುತ್ತಿದೆ. ನಮ್ಮ ದೇಶದಲ್ಲಿ ಸಮಸ್ಯೆಗಳು ಇವೆ. ಕೇಂದ್ರವೂ ಹೊಂದಾಣಿಕೆಯಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ರು.

Tags: bengaluru invest karnataka 2025BJPCongress PartyInvest Karnatakainvest karnataka 2025invest karnataka 2025 highlightsinvest karnataka 2025 in bengaluruinvest karnataka 2025 newsinvest karnataka 2025 summitinvest karnataka in bengaluruinvest karnataka newsinvest karnataka schemeinvest karnataka summitkarnataka economykarnataka latest newskarnataka newsmb patil invest karnataka 2025preparation for invest karnataka 2025ಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಹರಿಪ್ರಸಾದ್‌‌ಗೆ ಹೊಸ ಹುದ್ದೆ.. ಸಿಎಂ ಬಣಕ್ಕೂ ಸಿಗುತ್ತಂತೆ ಗುಡ್‌ ನ್ಯೂಸ್

Next Post

ಚಾಂಪಿಯನ್ಸ್ ಟ್ರೋಫಿಯಲ್ಲಿ ಕೋಹ್ಲಿ: ದಾಖಲೆ ಬರೆಹದ ಅಂಚಿನಲ್ಲಿ!

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

April 19, 2026
Next Post
ಚಾಂಪಿಯನ್ಸ್ ಟ್ರೋಫಿಯಲ್ಲಿ ಕೋಹ್ಲಿ: ದಾಖಲೆ ಬರೆಹದ ಅಂಚಿನಲ್ಲಿ!

ಚಾಂಪಿಯನ್ಸ್ ಟ್ರೋಫಿಯಲ್ಲಿ ಕೋಹ್ಲಿ: ದಾಖಲೆ ಬರೆಹದ ಅಂಚಿನಲ್ಲಿ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada