• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

Fact news ಹೋಗಿ Fact check ಬರುವಂತಾಗಿದೆ: ಕೆವಿಪಿ

ಪ್ರತಿಧ್ವನಿ by ಪ್ರತಿಧ್ವನಿ
February 13, 2025
in Top Story, ಕರ್ನಾಟಕ, ದೇಶ, ರಾಜಕೀಯ, ವಿಶೇಷ
0
Fact news ಹೋಗಿ Fact check ಬರುವಂತಾಗಿದೆ: ಕೆವಿಪಿ
Share on WhatsAppShare on FacebookShare on Telegram

ಜಗತ್ತು AI (Artificial Inteligence) ಹಿಂದೆ ಓಡುವಾಗ ನಾವು FI (Fake Intelligence) ಹಿಂದೆ ಓಡ್ತಾ ಇದೀವಿ: ಕೆ.ವಿ.ಪ್ರಭಾಕರ್

ADVERTISEMENT

Fact news ಹೋಗಿ Fact check ಬರುವಂತಾಗಿದೆ: ಕೆವಿಪಿ

ಕೋಲಾರ ಫೆ 13: ಜಗತ್ತು AI (Artificial Inteligence) ಹಿಂದೆ ಓಡುವಾಗ ನಾವು FI (Fake Intelligence) ಹಿಂದೆ ಓಡ್ತಾ ಇದೀವಿ. ಫೇಕ್ ನ್ಯೂಸ್ ಗಳ ಕಾರಣಕ್ಕೆ ಈಗ ಫ್ಯಾಕ್ಟ್ ಚೆಕ್ ಆರಂಭಿಸುವ ಸ್ಥಿತಿ ಬಂದಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಅಭಿಪ್ರಾಯಪಟ್ಟರು.

ಮಾಧ್ಯಮ‌ ಅಕಾಡೆಮಿ ಆಯೋಜಿಸಿದ್ದ “ಪತ್ರಿಕೋದ್ಯಮ ಇಂದು-ಮುಂದು” ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಪತ್ರಕರ್ತರಲ್ಲಿ ಅಧ್ಯಯನಶೀಲತೆ ಕಡಿಮೆ ಆಗುತ್ತಿದೆ. ಕೈಯಲ್ಲಿ ಲೋಗೋ ಹಿಡಿದು ಪ್ರಶ್ನೆ ಕೇಳುವ ಪತ್ರಕರ್ತರಿಗೆ ವಾಪಾಸ್ ಅದೇ ವಿಚಾರದ ಬಗ್ಗೆ ನಾವೇ ಒಂದು ಪ್ರಶ್ನೆ ಕೇಳಿದರೆ ಅವರಲ್ಲಿ ಉತ್ತರ ಇರುವುದಿಲ್ಲ. ಇದಕ್ಕೆ ಅಧ್ಯಯನಶೀಲತೆಯ ಕೊರತೆಯೇ ಕಾರಣ ಎಂದರು.

ಮತ್ತೊಂದು ಊಹಾ ಪತ್ರಿಕೋದ್ಯಮ‌ ಅತಿಯಾಗುತ್ತಿದೆ. ನಡೆಯದ ಸಂಗತಿಗಳನ್ನು ಅವರಿಗೆ ಅವರೇ ಊಹೆ ಮಾಡಿಕೊಂಡು ಬ್ರೇಕಿಂಗ್ ಸುದ್ದಿ ಕೊಡುವ ಹಾವಳಿ ಹೆಚ್ಚಾಗಿದೆ ಎಂದರು.

ಮಾಧ್ಯಮ ಅಕಾಡೆಮಿ ಇಂದು ಆಯೋಜಿಸಿರುವ ಪತ್ರಿಕೋದ್ಯಮ: ಇಂದು-ಮುಂದು” ವಿಷಯ ಕುರಿತ ಒಂದು ದಿನದ ಕಾರ್ಯಾಗಾರ ಅತ್ಯಂತ ಅರ್ಥಪೂರ್ಣ ಮತ್ತು ಅಗತ್ಯವಾದದ್ದು

ಪತ್ರಿಕಾ ವೃತ್ತಿಗೆ, ಮಾಧ್ಯಮ ಕ್ಷೇತ್ರಕ್ಕೆ ಬಂದೊದಗಬಹುದಾದ ಸವಾಲುಗಳನ್ನು ಮೊದಲೇ ಗ್ರಹಿಸಿ ಆ ಸವಾಲುಗಳನ್ನು ಗೆಲ್ಲಲು ಅಗತ್ಯವಾದ ಬೌದ್ಧಿಕ ಕಸರತ್ತು ನಡೆಸುವುದು ಅತ್ಯಗತ್ಯ ಎಂದರು.

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಪತ್ರಿಕೋದ್ಯಮವನ್ನು ಸಮಾಜದ ಪ್ರಾಣವಾಯು ಅಂತ ಕರೆದಿದ್ದಾರೆ. ಆದರೆ ಈ ಮಾತು ಈಗ ಪತ್ರಿಕೋದ್ಯಮದಲ್ಲಿ ಉಳಿದಿದೆಯಾ ಎಂದು ನಾವೇ ಪ್ರಶ್ನಿಸಿಕೊಳ್ಳಬೇಕು ಎಂದರು.

Kharge: ವಕ್ಫ್ ಮಸೂದೆ ಕುರಿತು ಸಂಸತ್ತಿನಲ್ಲಿ ಖರ್ಗೆ ಘರ್ಷಣೆ..! #waqfbill #rajsabha #waqfboard

ಇವತ್ತಿನ ಈ ಕಾರ್ಯಾಗಾರಕ್ಕೆ ಎರಡು ಕಾರಣಗಳು ಇರಬಹುದು ಎಂದು ನಾನು ಭಾವಿಸುತ್ತೇನೆ…

1) AI (ಕೃತಕ‌ ಬುದ್ದಿ ಮತ್ತೆ) ಹಾಗೂ ಇತರೆ ತಂತ್ರಜ್ಞಾನ‌ ತಂದೊಡ್ಡುವ ಸವಾಲು.

2) ತಂತ್ರಜ್ಞಾನದ ಜೊತೆಗೆ Fake News ವೇಗವೂ ಹೆಚ್ಚಾಗುತ್ತಿರುವ ಸವಾಲು.

ಇವೆರಡೂ ಸವಾಲುಗಳಿಂದ ಮಾದ್ಯಮ ಕ್ಷೇತ್ರ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಏನಿದ್ದರೂ ಇವೆರಡನ್ನೂ ಮುಖಾಮುಖಿಯಾಗಿ ನಾವು ಎದುರಿಸಲೇಬೇಕು ಮತ್ತು ಜೀರ್ಣಿಸಿಕೊಳ್ಳಲೇಬೇಕಿದೆ ಎಂದರು.

ನಮ್ಮ ಮಾಧ್ಯಮ ಕ್ಷೇತ್ರಕ್ಕೆ ಜೀರ್ಣಿಸಿಕೊಳ್ಳುವ ಶಕ್ತಿ ಇದೆ. ಇಂತಹ ಹಲವಾರು ಸವಾಲುಗಳನ್ನು ಜೀರ್ಣಿಸಿಕೊಂಡಿರುವ ಉದಾಹರಣೆ ಕೂಡ ನಮ್ಮ‌ ಮುಂದಿದೆ. ಇದಕ್ಕೆ ಉತ್ತಮ‌ ಉದಾಹರಣೆ ಎಂದರೆ ಕೋವಿಡ್.

ಕೋವಿಡ್ ಬಂದಾಗ ಮಾಧ್ಯಮಗಳು ಅದರಲ್ಲೂ ಮುದ್ರಣ ಮಾಧ್ಯಮದ ಭವಿಷ್ಯವೇ ಮುಗಿದುಹೋಯ್ತು ಎನ್ನುವ ಆತಂಕ ಮನೆ ಮಾಡಿತ್ತು.‌

ಆದರೆ, FICCI (Federation of Indian Chambers of Commerce and Industry) ಸಂಸ್ಥೆ 2023 ರಲ್ಲಿ ಮುದ್ರಣ ಮಾಧ್ಯಮಗಳ ಸ್ಥಿತಿ ಗತಿಯ ವರದಿ ಬಿಡುಗಡೆ ಮಾಡಿದೆ. ಈ ವರದಿ ಬಹಳ ಭರವಸೆ ಮೂಡಿಸುವಂತಿದೆ.ಕೋವಿಡ್ ಸಂದರ್ಭದಲ್ಲಿ ಅಪಾರವಾಗಿ ನೆಲಕಚ್ಚಿದ್ದ ಮುದ್ರಣ ಮಾಧ್ಯಮ 2023 ರಲ್ಲಿ ಬಹಳ ಚೇತರಿಸಿಕೊಂಡಿದೆ.

*ದೇಶದ ಮುದ್ರಣ ಮಾಧ್ಯಮದ ಆದಾಯ 4% ಹೆಚ್ಚಾಗಿ ವಾರ್ಷಿಕ 260 ಬಿಲಿಯನ್ ರೂಪಾಯಿಗೆ ತಲುಪಿದೆ. 2027ಕ್ಕೆ ಈ ಬೆಳವಣಿಗೆ ದರ ಇನ್ನೂ ಹೆಚ್ಚಾಗಿ 295.7 ಬಿಲಿಯನ್ ಗೆ ಏರಿಕೆ ಆಗಲಿದೆ ಎನ್ನುವ ಆಶಾ ಭಾವನೆ ವ್ಯಕ್ತವಾಗಿದೆ. ಇದರಲ್ಲಿ…

*ಜಾಹಿರಾತು ಆದಾಯ 4% ಹೆಚ್ಚಾಗಿದೆ

*ಪತ್ರಿಕೆಗಳ ಪ್ರಸಾರದಿಂದ ಬರುವ ಆದಾಯ 3% ಹೆಚ್ಚಾಗಿದೆ.

*ದಿನಪತ್ರಿಕೆಗಳಲ್ಲದ ಮ್ಯಾಗ್ಸೀನ್ ಗಳ ಆದಾಯ 3% ಹೆಚ್ಚಾಗಿದೆ.

*ಜಾಹಿರಾತು insertion ಗಳ ಪ್ರಮಾಣ 4% ಹೆಚ್ಚಾಗಿದೆ. ( ಪತ್ರಿಕೆಗಳ ಒಳಗೆ ಜಾಹಿರಾತು ಕರಪತ್ರಗಳನ್ನು ಹಾಕಿ ಕಳುಹಿಸುವುದು).

*ಇಂಗ್ಲಿಷ್ ಪತ್ರಿಕೆಗಳ circulation ಆದಾಯ 10% ಹೆಚ್ಚಾಗಿದ್ದರೆ, ಕನ್ನಡ ಮತ್ತು ಇತರೆ ರಾಜ್ಯ ಭಾಷಿಕ ಪತ್ರಿಕೆಗಳ circulation ಆದಾಯ 2% ಹೆಚ್ಚಾಗಿದೆ.

*ಸರ್ಕಾರಗಳ ಜಾಹಿರಾತು ಪ್ರಮಾಣ ಕೂಡ ಹೆಚ್ಚಾಗಿದೆ.

*ಎಲ್ಲಕ್ಕಿಂತ ಮುಖ್ಯವಾಗಿ, ಜಾಹಿರಾತುದಾರರ ವಿಶ್ವಾಸಾರ್ಹತೆಯನ್ನು ಮುದ್ರಣ ಮಾಧ್ಯಮಗಳು ಉಳಿಸಿಕೊಂಡಿವೆ ಎಂದು FICCI ಹೇಳಿದೆ.

1,50000 ಜಾಹಿರಾತುದಾರರು, 185000 ಬ್ರಾಂಡ್ ಗಳು ಮುದ್ರಣ ಮಾಧ್ಯಮಗಳ ಮೇಲೆ ಅಪಾರ ಭರವಸೆ ವ್ಯಕ್ತಪಡಿಸಿವೆ

ಹೀಗಾಗಿ ಆದಾಯ, ಗಳಿಕೆಯ ಸವಾಲನ್ನು ಮುದ್ರಣ ಮಾಧ್ಯಮ ನಿರಂತರವಾಗಿ ಗೆಲ್ಲುತ್ತಲೇ ಇದೆ ಎಂದು ವಿಶ್ಲೇಷಿಸಿದರು.

ಅಚ್ಚುಮೊಳೆ ಕಾಲದಿಂದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವರೆಗೂ ಹಲವಾರು ತಂತ್ರಜ್ಞಾನದ ಸವಾಲುಗಳನ್ನು ಮಾಧ್ಯಮ ಲೋಕ ಜೀರ್ಣಿಸಿಕೊಳ್ಳುತ್ತಲೇ ಬೆಳೆದಿದೆ ಎಂದರು.

ಜಗತ್ತು AI (Artificial Inteligence) ಹಿಂದೆ ಓಡುವಾಗ ನಾವು FI (Fake Intelligence) ಹಿಂದೆ ಓಡ್ತಾ ಇದೀವಿ. ಪತ್ರಿಕೋದ್ಯಮ ತಂತ್ರಜ್ಞಾನದಲ್ಲಿ ಎಷ್ಟೇ ಉನ್ನತ ಮಟ್ಟಕ್ಕೇರಿದರೂ, ಅದರ ನೈತಿಕ ಗುಣಮಟ್ಟ ಪಾತಾಳ ಸೇರದಂತೆ ಕಾಪಾಡಿಕೊಳ್ಳುವ ನೈತಿಕ ಮತ್ತು ಸಾಮಾಜಿಕ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.ಸುಳ್ಳುಸುದ್ದಿಗಳನ್ನು ತಡೆಯುವ ಸವಾಲು ಮತ್ತು ನಿಖರತೆ ಹಾಗೂ ವಾಸ್ತವಾಂಶಗಳ ಪರಿಶೀಲನೆಯ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಇದಕ್ಕಾಗಿ fact check ಆರಂಭಿಸಲಾಗಿದೆ ಎಂದರು.

Tags: artificial intelligencecenter for financial markets and policyhow to weite a bookintelligencekdp questions and answers
Previous Post

ಕುಂಬಳಕಾಯಿ ಮತ್ತು ಸೂರ್ಯಕಾಂತಿ ಬೀಜಗಳ ಆರೋಗ್ಯಕರ ಲಾಭಗಳು ಮತ್ತು ಉಪಯೋಗಗಳು

Next Post

ಇನ್ವೆಸ್ಟ್ ಕರ್ನಾಟಕ: ವೋಲ್ವೊದಿಂದ 1,400 ಕೋಟಿ ರೂ. ಹೂಡಿಕೆ,

Related Posts

ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 
Top Story

ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 

by Chetan
July 2, 2025
0

ರಾಜ್ಯ ಕಾಂಗ್ರೆಸ್ ಶಾಸಕರಿಂದ ರಣದೀಪ್ ಸಿಂಗ್ ಸುರ್ಜೇವಾಲ (Randeep sing surjewala) ಅಭಿಪ್ರಾಯ ಸಂಗ್ರಹ ಮಾಡುತ್ತಿರುವ  ವಿಚಾರಕ್ಕೆ ಸಂಬಂಧಪಟ್ಟಂತೆ ಡಿಸಿಎಂ ಡಿಕೆ ಶಿವಕುಮಾರ್ (Dcm Dk Shivakumar) ಪ್ರತಿಕ್ರಿಯಿಸಿದ್ದು,...

Read moreDetails
ಸಿದ್ದು..ಸೋನಿಯಾ ಭೇಟಿ ಮಾಡಿಸಿದ್ದು ನಾನಲ್ಲ..! – ಸಿದ್ದರಾಮಯ್ಯ ಮಾಸ್ ಲೀಡರ್ : ಯು ಟರ್ನ್ ಹೊಡೆದ ಬಿ.ಆರ್ ಪಾಟೀಲ್ 

ಸಿದ್ದು..ಸೋನಿಯಾ ಭೇಟಿ ಮಾಡಿಸಿದ್ದು ನಾನಲ್ಲ..! – ಸಿದ್ದರಾಮಯ್ಯ ಮಾಸ್ ಲೀಡರ್ : ಯು ಟರ್ನ್ ಹೊಡೆದ ಬಿ.ಆರ್ ಪಾಟೀಲ್ 

July 2, 2025
ಇನ್ನೇನು ಬಂದೇಬಿಟ್ಟ ನೋಡಿ ಡೆವಿಲ್..! – ನಟ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡದಿಂದ ಬಿಗ್ ಅಪ್ಡೇಟ್ 

ಇನ್ನೇನು ಬಂದೇಬಿಟ್ಟ ನೋಡಿ ಡೆವಿಲ್..! – ನಟ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡದಿಂದ ಬಿಗ್ ಅಪ್ಡೇಟ್ 

July 2, 2025
ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

July 2, 2025
ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

July 2, 2025
Next Post
`ನಾವೀನ್ಯತೆಗಳ ಭವಿಷ್ಯ’ ಪ್ರದರ್ಶನ, 40ಕ್ಕೂ ಹೆಚ್ಚು ಕಂಪನಿ ಭಾಗಿ (ಬಾಕ್ಸ್)

ಇನ್ವೆಸ್ಟ್ ಕರ್ನಾಟಕ: ವೋಲ್ವೊದಿಂದ 1,400 ಕೋಟಿ ರೂ. ಹೂಡಿಕೆ,

Recent News

ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 
Top Story

ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 

by Chetan
July 2, 2025
ಸಿದ್ದು..ಸೋನಿಯಾ ಭೇಟಿ ಮಾಡಿಸಿದ್ದು ನಾನಲ್ಲ..! – ಸಿದ್ದರಾಮಯ್ಯ ಮಾಸ್ ಲೀಡರ್ : ಯು ಟರ್ನ್ ಹೊಡೆದ ಬಿ.ಆರ್ ಪಾಟೀಲ್ 
Top Story

ಸಿದ್ದು..ಸೋನಿಯಾ ಭೇಟಿ ಮಾಡಿಸಿದ್ದು ನಾನಲ್ಲ..! – ಸಿದ್ದರಾಮಯ್ಯ ಮಾಸ್ ಲೀಡರ್ : ಯು ಟರ್ನ್ ಹೊಡೆದ ಬಿ.ಆರ್ ಪಾಟೀಲ್ 

by Chetan
July 2, 2025
ಇನ್ನೇನು ಬಂದೇಬಿಟ್ಟ ನೋಡಿ ಡೆವಿಲ್..! – ನಟ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡದಿಂದ ಬಿಗ್ ಅಪ್ಡೇಟ್ 
Top Story

ಇನ್ನೇನು ಬಂದೇಬಿಟ್ಟ ನೋಡಿ ಡೆವಿಲ್..! – ನಟ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡದಿಂದ ಬಿಗ್ ಅಪ್ಡೇಟ್ 

by Chetan
July 2, 2025
ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.
Top Story

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

by ಪ್ರತಿಧ್ವನಿ
July 2, 2025
ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ
Top Story

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

by ಪ್ರತಿಧ್ವನಿ
July 1, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 

ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 

July 2, 2025
ಸಿದ್ದು..ಸೋನಿಯಾ ಭೇಟಿ ಮಾಡಿಸಿದ್ದು ನಾನಲ್ಲ..! – ಸಿದ್ದರಾಮಯ್ಯ ಮಾಸ್ ಲೀಡರ್ : ಯು ಟರ್ನ್ ಹೊಡೆದ ಬಿ.ಆರ್ ಪಾಟೀಲ್ 

ಸಿದ್ದು..ಸೋನಿಯಾ ಭೇಟಿ ಮಾಡಿಸಿದ್ದು ನಾನಲ್ಲ..! – ಸಿದ್ದರಾಮಯ್ಯ ಮಾಸ್ ಲೀಡರ್ : ಯು ಟರ್ನ್ ಹೊಡೆದ ಬಿ.ಆರ್ ಪಾಟೀಲ್ 

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!