ಇಂದು ಮಾಘಿ ಪೂರ್ಣಿಮಾ (Maaghi poornima) ಪ್ರಯುಕ್ತ ಕೋಟಿಗಟ್ಟಲೇ ಜನ ಪುಣ್ಯಸ್ನಾನದಲ್ಲಿ (Holy dip) ಭಾಗಿಯಾಗಲಿದ್ದಾರೆ. ಪ್ರಯಾಗರಾಜ್ ನ ಮಹಾಕುಂಭಮೇಳದಲ್ಲಿ (Maha kumbh 2025) ಇಂದು ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪುಣ್ಯಸ್ನಾನದಾಳಿ ಭಾಗಿಯಾಗಲಿರುವುದು ವಿಶೇಷ.

ಈಗಾಗಲೇ ಪ್ರಯಾಗರಾಜ್ ನಲ್ಲಿ ಪುಣ್ಯ ಸ್ನಾನ ನೆರವೇರಿಸಿ ಕಾಶೀ, ಅಯೋಧ್ಯೆ, ಕಾಶ್ಮೀರದ ಕಡೆ ಅಖಾಡಗಳ ಸಾಧು ಸಂತರು, ನಾಗಾಸಾಧುಗಳು ಹೊರಟಿದ್ದಾರೆ.ಇಂದು ಮುಂಜಾನೆಯಿಂದಲೇ ಮಾಘೀ ಪೂರ್ಣಿಮೆಯ ತೀರ್ಥಸ್ನಾನ ಆರಂಭವಾಗಿದೆ.
ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುವುದರಿಂದ ಇಂದು ಪ್ರಯಾಗರಾಜ್ ನಲ್ಲಿ ಇಂದು ನೋ ವೆಹಿಕಲ್ ಜೋನ್ ಜಾರಿ ಮಾಡಲಾಗಿದೆ. ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಘಾಟ್ ಗಳತ್ತ ಜನರು ತೆರಳುತ್ತಿದ್ದಾರೆ.