ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ದಲಿತ ನಾಯಕರ ದೆಹಲಿ ಯಾತ್ರೆ ಕುತೂಹಲಕ್ಕೆ ಕಾರಣವಾಗಿದ್ದು, ಈ ಬಗ್ಗೆ ದೆಹಲಿಯಲ್ಲಿ ಸಚಿವ ಸತೀಶ್ ಜಾರಕಿಹೋಳಿ ಪ್ರತಿಕ್ರಿಯಿಸಿದ್ದಾರೆ. ನಮ್ಮ ಇಲಾಖೆಯಲ್ಲಿ ಸಾಕಷ್ಟು ಕೆಲಸ ಬಾಕಿ ಇದೆ. ಹೀಗಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿಯಾಗಿದ್ದೆ.ನಮ್ಮ ಸರ್ಕಾರದ ಕಡೆಯಿಂದಲೂ ಕೆಲವು ದಾಖಲೆ ನೀಡಬೇಕಿದೆ ಎಂದಿದ್ದಾರೆ.

ಇನ್ನು ಟನಲ್ ರೋಡ್ ರಾಜ್ಯದ ವಿಷಯ ಎಂದು ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿ ರಾಜ್ಯ ಸರ್ಕಾರ ಮಾಡಬೇಕಾ ಅಥಾವ ಕೇಂದ್ರ ಸರ್ಕಾರ ಮಾಡಬೇಕಾ ನೋಡಬೇಕು,ಇದನ್ನು ನಾವು ನಿರ್ಧಾರ ಮಾಡಬೇಕು ಎಂದಿದ್ದಾರೆ.

ಇನ್ನು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದೇನೆ.ಒಂದು ಗಂಟೆಯ ಸಮಯ ನೀಡಿದರು. ಬೀದರ್ ನಿಂದ ಚಾಮರಾಜನಗರ ವರೆಗೂ ವಿಷಯ ಚರ್ಚೆ ಆಗಿದೆ.ದಲಿತ ಸಮುದಾಯದ ಸಮಾವೇಶ ಮಾಡುವ ಬಗ್ಗೆ ಚರ್ಚೆ ಮಾಡಿಲ್ಲ,ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಮಾತನಾಡಲಿಲ್ಲ, ಅದು ಹೈಕಮಾಂಡ್ ಗೆ ಬಿಟ್ಟಿದ್ದು ಎಂದಿದ್ದಾರೆ.
ನಮ್ಮೊಟ್ಟಿಗೆ ಬೇರೆ ದಲಿತ ಸಚಿವರು ಬಂದಿದ್ದರೆ, ಅವರ ಇಲಾಖೆ ಕೆಲಸ ಇರಬಹುದು, ಆ ಕಾರಣಕ್ಕಾಗಿ ಬಂದಿರುತ್ತಾರೆ ಅಷ್ಟೇ. ಇನ್ನು ವರಿಷ್ಠರನ್ನು ಭೇಟಿ ಮಾಡಿದಾಗ ರಾಜಕೀಯ, ಸರ್ಕಾರದ ಬಗ್ಗೆ ನಮ್ಮ ಅಭಿಪ್ರಾಯ ಹೇಳಿದ್ದೇವೆ ಎಂದಿದ್ದಾರೆ.