ಏರೋ ಇಂಡಿಯಾ (Aero india air show) ಏರ್ ಶೋ ಎರಡನೇ ದಿನಕ್ಕೆ ಕಾಲಿಟ್ಟಿದೆ. ಬೆಂಗಳೂರಲ್ಲಿ (Bengaluru) ಉಕ್ಕಿನ ಹಕ್ಕಿಗಳ ಘರ್ಜನೆ , ಹಾರಾಟ, ಮನಮೋಹಕ ಸಂಯೋಜನೆಗಳು 2ನೇ ದಿನವೂ ಮುಂದುವರೆಯಲಿದ್ದು ವೈಮಾನಿಕ ಕಸರತ್ತು ನಡೆಸಲಿದೆ.

ಇದೆಲ್ಲದರ ಜೊತೆಗೆ ಬಾಹ್ಯಕಾಶ ಉದ್ಯಮಿಗಳ ಮುಖಾಮುಖಿ ಮತ್ತು ಮಾತುಕತೆಗೆ ಕೂಡ ವೇದಿಕೆ ಸಜ್ಜಾಗಿದೆ. ಇಂದು ಕೂಡ ಬಾನಂಗಳದಲ್ಲಿ ಲೋಹದ ಹಕ್ಕಿಗಳು ಘರ್ಜಿಸಲಿದೆ. 12 ಗಂಟೆಗೆ ವೈಮಾನಿಕ ಪ್ರದರ್ಶನ ಶುರುವಾಗಲಿದ್ದು, ಏರ್ ಶೋ ನಲ್ಲಿ ಸುಖೋಯ್, ಸೂರ್ಯಕಿರಣ್, ಹೆಲಿಕಾಪ್ಟರ್‌ಗಳ ತಂಡ ಪ್ರದರ್ಶನ ನೀಡಲಿದೆ.

ಇವತ್ತಿನ ಆಹ್ವಾನಿತರು, ADVA ಪಾಸ್ ಹೊಂದಿದವರಿಗೆ ಅವಕಾಶ ಇದೆ. ಇವತ್ತೂ ಕೂಡಾ ಎಕ್ಸಿಬಿಷನ್ ವೀಕ್ಷಣೆಗೆ ವಿವಿಧ ದೇಶಗಳ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ.
ಇನ್ನು ಮತ್ತೊಂದೆಡೆ ಏರ್ ಶೋ ಹಿನ್ನಲೆ ಬೆಳ್ಳಂ ಬೆಳಗ್ಗೆ ಸಿಟಿ ಮಂದಿಗೆ ಟ್ರಾಫಿಕ್ ಬಿಸಿ ತಟ್ಟಿದೆ.ಯಲಹಂಕ ಸುತ್ತ ಮುತ್ತ ಟ್ರಾಫಿಕ್ ಜಾಮ್ ಉಂಟಾಗಿದ್ದು, ಫ್ಲೈ ಓವರ್ ನಲ್ಲಿ ಕೂಡ ಫುಲ್ ಟ್ರಾಫಿಕ್ ಜಾಮ್ ಆಗಿ ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆಗಿದ್ರಿಂದ ವಾಹನ ಸವಾರರು ಹೈರಾಣಾದ್ರು.