
ಬೆಂಗಳೂರು: ಏರ್ ಶೋ (Aero India) ವೈಮಾನಿಕ ಪ್ರದರ್ಶನಕ್ಕ ಈಗಾಗಲೇ ಅದ್ಧೂರಿ ಚಾಲನೆ ಸಿಕ್ಕಿದೆ. ಇಂದಿನಿಂದ ಏರ್ ಶೋ (Air Show) ಆರಂಭವಾಗುತ್ತಿದ್ದು, ಈ ಬೆಂಗಳೂರು ಏರ್ ಶೋ ಏಷ್ಯಾದಲ್ಲೇ ಅತ್ಯಂತ ದೊಡ್ಡ ಏರ್ ಶೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ‘ಏರೋ ಇಂಡಿಯಾ 2025’ಗೆ (Aero India 2025) ರಕ್ಷಣಾ ಸಚಿವ ರಾಜನಾಥ ಸಿಂಗ್ ಅಧಿಕೃತ ಚಾಲನೆ ನೀಡಿದ್ದಾರೆ.

ಹೀಗಾಗಿ ಇಂದು ಹಿರಿಯ ಅಧಿಕಾರಿಗಳು ಕೂಡ ಬೆಳಗ್ಗೆ ತಿಂಡಿ ಸೇವಿಸಿ ಪರಿಶೀಲನೆ.ಆದ್ರೆ ಮಧ್ಯಾಹ್ನ ಊಟದಲ್ಲಿ ಮತ್ತೆ ಹುಳ ನೀಡಿದ ಊಟ ಪಲಾವ್ ನಲ್ಲಿ ಜೀವಂತ ಹುಳಗಳು ಪತ್ತೆ ಒಂದು ಊಟಕ್ಕೆ 200 ರೂಪಾಯಿ ಓರ್ವ ಸಿಬ್ಬಂದಿಗೆ
ಆದ್ರೆ ಕಳಪೆ ಊಟ ನೀಡುತ್ತಿರುವ ಪೊಲೀಸ್ ಇಲಾಖೆ ಊಟ ನೋಡಿ ಬೇಸರಗೊಂಡ ಸಿಬ್ಬಂದಿ ಗಳು

ಕಳಪೆ ಊಟದ ಬಗ್ಗೆ ಧ್ವನಿ ಎತ್ತಿದ್ರೆ ಹಿರಿಯ ಅಧಿಕಾರಿಗಳ ಯಾವಾಗ ಏನು ಕ್ರಮ ಜರುಗಿಸುತ್ತಾರೆ ಅನ್ನೊ ಭಯ. ಇಲ್ಲ ಹಿರಿಯ ಅಧಿಕಾರಿಗಳಿಂದ ಟಾರ್ಗೆಟ್ ಅಗುವ ಭಯ.ಏನಿದು ಪೊಲೀಸ್ ಆಯುಕ್ತೇ ಹುಳದ ಊಟ ಕೊಡುವುದು ಸರಿಯೇ..?
ಗೃಹ ಸಚಿವರೇ ಎನಿದು ನಿಮ್ಮ ಇಲಾಖೆಯ ಕರ್ಮಕಾಂಡ ಊಟ ಸರಬರಾಜು ಮಾಡುವರ ವಿರುದ್ದ ಏನು ಕ್ರಮ..?
ಒಂದು ಹೊತ್ತಿನ ಊಟದಲ್ಲು ಕೂಡ ಹಣ ಮಾಡಲು ಹೊರಟ್ಟಿದ್ದೀರಾ..?

ಏರ್ ಶೋ ರಿಹರ್ಸಲ್ ವೇಳೆ ಪೊಲೀಸರಿಗೆ ನೀಡಿದ ಊಟದಲ್ಲಿ ಜಿರಳೆ ಪತ್ತೆಯಾದ ಹಿನ್ನಲೆ ಇಂದು ಈಶಾನ್ಯ ವಿಭಾಗದ ಡಿಸಿಪಿ ವಿ.ಜೆ.ಸಜಿತ್ ಅವರು, ಖದ್ದು ಉಪಾಹಾರ ಸೇವನೆ ಮಾಡಿ ಆಹಾರ ಪರಿಶೀಲನೆ ಮಾಡಿದ್ದಾರೆ.