
ಫೈನಾನ್ಸ್ ಕಾಟಕ್ಕೆ ಬ್ರೇಕ್ ಹಾಕಲು ಸರ್ಕಾರ ಕಳಿಸಿದ್ದ ಸುಗ್ರಿವಾಜ್ಞೆಗೆ ಅಂಕಿತ ಹಾಕದೇ ರಾಜ್ಯಪಾಲರು ವಾಪಸ್ ಕಳಿಸಿದ್ರು. ಈ ವಿಚಾರದ ಬಗ್ಗೆ ಕಾಂಗ್ರೆಸ್ ನಾಯಕ ಉಗ್ರಪ್ಪ ಮಾತನಾಡಿ, ರಾಜ್ಯಪಾಲರಿಗೆ ಸ್ವಲ್ಪವಾದರೂ ಗೌರವ ಇದ್ರೆ.. ಸಂವಿಧಾನದ ಆಶಯ ತಿಳಿದುಕೊಳ್ಳಬೇಕಿತ್ತು. ರಾಜ್ಯ ಸರ್ಕಾರದ ಶಿಫಾರಸ್ಸನ್ನು ತಿರಸ್ಕಾರ ಮಾಡಬಾರದಿತ್ತು ಎಂದಿದ್ದಾರೆ.

ಪೊಲೀಸ್ಗೆ ಪವರ್ ಕೊಡುವ ಜೊತೆಗೆ ಸಾಲ ಕಟ್ಟಲು ಸಾಧ್ಯವಿಲ್ಲದವರನ್ನ ಋಣ ಮುಕ್ತ ಮಾಡುವುದಿತ್ತು. ಆದ್ರೆ ಈ ಶಿಫಾರಸು ಮಾಡಿರೋದನ್ನ ರಾಜ್ಯಪಾಲರು ಕೆಲವು ಕಾರಣ ಕೊಟ್ಟು ವಾಪಾಸ್ ಮಾಡಿದ್ದಾರೆ. ರಾಜ್ಯಪಾಲರು ಕೊಟ್ಟಿರೋ ರೀಸನ್‌ನ ನೋಡಿದ್ರೆ ಬಿಜೆಪಿಯವರು ರಾಜ್ಯಪಾಲರ ಮೇಲೆ ಒತ್ತಡ ಹೇರಿದ್ದಾರೆ ಅನ್ನಿಸುತ್ತೆ ಎಂದಿದ್ದಾರೆ.
ಕಾನೂನು ಸಚಿವ ಎಚ್ಕೆ ಪಾಟೀಲ್ ಸ್ವಂತ ಊರು ಗದಗ ಜಿಲ್ಲೆಯ ಹುಲಕೋಟಿಯಲ್ಲೇ ಫೈನಾನ್ಸ್ ಕಿರುಕುಳ ಹೆಚ್ಚಾಗಿದೆ. ಪ್ರತಿದಿನ ಬಂದು ಸಾಲ ಕಟ್ಟುವಂತೆ ಫೈನಾನ್ಸ್ ಸಿಬ್ಬಂದಿ ಟಾರ್ಚರ್ ಕೊಡ್ತಿದ್ದಾರೆ. ಏನಾದ್ರೂ ಮಾಡಿ ನಮಗೆ ಸಾಲ ವಾಪಸ್ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.. ಹೀಗಾಗಿ ಮಹಿಳೆಯರು ಮಾಂಗಲ್ಯ ಸರ ಮಾರಾಟ ಮಾಡಿ ಹಣ ಕಟ್ಟಿದ್ದಾರೆ. ಇನ್ನು ಸಾವಿತ್ರಿ ಗೊಣಪ್ಪನವರು ಅನ್ನೋರು ಫೈನಾನ್ಸ್ ಕಾಟಕ್ಕೆ ರೋಸಿ ಹೋಗಿದ್ದು, ಫೈನಾನ್ಸ್ ಅವರ ಹಾವಳಿ ನಿಯಂತ್ರಣ ಮಾಡುವಂತೆ ಎಚ್.ಕೆ ಪಾಟೀಲ್ ಅವರಿಗೆ ಮನವಿ ಮಾಡಿದ್ದಾರೆ.

ಸಾಲದ ಕಂತು ಕಟ್ಟಿಲ್ಲ ಅಂತ ಬ್ಯಾಂಕ್ ಸಿಬ್ಬಂದಿ ಮನೆ ಸೀಜ್ ಮಾಡಿದ್ದು ಕುಟುಂಬ ಬೀದಿಗೆ ಬಿದ್ದಿದೆ. ಕಿತ್ತೂರು ತಾಲೂಕಿನ ಕುಲವಳ್ಳಿಯಲ್ಲಿ ಈ ಘಟನೆ ನಡೆದಿದೆ. ದಸ್ತಗಿರಿ ಸಾಬ್ ಎನ್ನುವವವರು ಬ್ಯಾಂಕ್ನಿಂದ 5 ಲಕ್ಷ ಸಾಲ ಪಡೆದಿದ್ರು. ಆದ್ರೆ ಕೆಲವು ಕಾರಣದಿಂದ 8 ಕಂತುಗಳನ್ನ ಕಟ್ಟಲು ಆಗಿರಲಿಲ್ಲ. ಹೀಗಾಗಿ ಬ್ಯಾಂಕ್ ಕೋರ್ಟ್ ಮೊರೆ ಹೋಗಿತ್ತು. ಕೋರ್ಟ್ ಆದೇಶದಂತೆ ಬ್ಯಾಂಕ್ ಸಿಬ್ಬಂದಿ ಮನೆ ಸೀಝ್ ಮಾಡಿದ್ದು, ಕುಟುಂಬ ಬೀದಿಗೆ ಬಿದ್ದಿದೆ.
