ಬಾಲಿವುಡ್ (Bollywood) ಖ್ಯಾತ ನಟ ಸೋನು ಸೂದ್ (Sonu sood) ವಿರುದ್ಧ ನ್ಯಾಯಾಲಯ ಬಂಧನದ ವಾರೆಂಟ್ ಹೊರಡಿಸಿದೆ. ಹೌದು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಪಂಜಾಬ್ ಕೋರ್ಟ್ (Punjab court) ಅರೆಸ್ಟ್ ವಾರಂಟ್ (Arrest warrent) ಜಾರಿಮಾಡಿದೆ.
![](https://pratidhvani.com/wp-content/uploads/2025/02/IMG_7739.jpeg)
ಈ ಪ್ರಕರಣದಲ್ಲಿ ಲೂಧಿಯಾನ ಮೂಲದ ವಕೀಲ ರಾಜೇಶ್ ಖನ್ನಾ, ಮೋಹಿತ್ ಶುಕ್ಲಾ ಎಂಬುವರ ವಿರುದ್ಧ 10 ಲಕ್ಷ ರೂಪಾಯಿ ವಂಚನೆ ಆರೋಪ ಮಾಡಿ ಕೇಸ್ ದಾಖಲಿಸಿದ್ದರು.ನಕಲಿ ರಿಜಿಕಾ ನಾಣ್ಯದಲ್ಲಿ ಹೂಡಿಕೆ ಮಾಡುವಂತೆ ಆಮಿಷವೊಡ್ಡಲಾಗಿದೆ ಎಂದು ಆರೋಪಿಸಿದ್ರು.
ಈ ಪ್ರಕರಣ ಸಂಬಂಧ ಸಾಕ್ಷ್ಯ ಹೇಳಲು ಸೋನು ಸೂದ್‌ರನ್ನ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿತ್ತು.ಆದ್ರೆ ಸೋನು ಸೂದ್ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆ ಅವರ ವಿರುದ್ಧ ಅರೆಸ್ಟ್ ವಾರಂಟ್ ಜಾರಿಮಾಡಲಾಗಿದೆ.