ಮಂಡ್ಯದಲ್ಲಿ (Mandya) ಬಾಲಕಿಯ ಮೇಲೆ ನಡೆದ (Rape case) ಅಮಾನುಷ ಕೃತ್ಯ ಖಂಡಿಸಿದ ಮಾಜಿ ಸಂಸದೆ ಸುಮಲತ (Sumalatha) ಆಕ್ರೋಶ ವ್ಯಕ್ತಪಡಿಸಿದ್ದಾರೆ. 8 ವರ್ಷದ ಬಾಲಕಿಯ ಮೇಲೆ ನಡೆದಿರುವ ಅಮಾನುಷ ಕೃತ್ಯ ಇಡೀ ಸಮಾಜವೇ ತಲೆ ತಗ್ಗಿಸುವ ಘಟನೆಯಾಗಿದೆ ಎಂದಿದ್ದಾರೆ.
ಹೆಣ್ಣು ಲಿಂಗ ಭ್ರೂಣ ಹತ್ಯೆಯ ಸಂಗತಿಯಿಂದ ಚೇತರಿಸಿಕೊಳ್ಳುವ ಮೊದಲೇ ಇಂತಹ ಒಂದು ಕುಕೃತ್ಯ ನಡೆದಿರುವುದು ವಿಪರ್ಯಾಸ ಎಂದ ಅವರು ಅಪರಾಧಿಗಳಿಗೆ ಕಾನೂನು ಸುವ್ಯವಸ್ಥೆಯ ಬಗ್ಗೆ ಆತಂಕವೇ ಇಲ್ಲವೇ? ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಹೆಣ್ಣು ಮಕ್ಕಳ ರಕ್ಷಣೆ ಕೇವಲ ಹೇಳಿಕೆಗೆ ಸೀಮಿತವಾಗದೆ ನಿಜವಾಗಿಯೂ ಕಾರ್ಯರೂಪಕ್ಕೆ ಬರಬೇಕು.ಇಂತಹ ಘಟನೆಗಳ ಬಗ್ಗೆ ತಿಳಿದು ನನ್ನಂತಹ ಎಲ್ಲಾ ತಾಯಿ ಹೃದಯಕ್ಕೂ ಮುಂದಿನ ಪೀಳಿಗೆಯ ಬಗ್ಗೆ ಭಯ ಹಾಗೂ ಆತಂಕ ಮೂಡುತ್ತಿದೆ ಎಂದಿದ್ದಾರೆ.
ಈ ಪೈಶಾಚಿಕ ಕೃತ್ಯವೆಸಗಿದವರನ್ನು ಕೂಡಲೇ ಬಂಧಿಸಿ, ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮಂಡ್ಯ ಜಿಲ್ಲಾ ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸುತ್ತೇನೆ.ಹಾಗೆಯೇ, ಈ ಘಟನೆಯನ್ನು ವಿಶೇಷವಾಗಿ ಪರಿಗಣಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡುವ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದು ಸುಮಲತಾ ಹೇಳಿದ್ದಾರೆ.