ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಗೆ ಬ್ರೇಕ್ ಹಾಕುವ ಸಲುವಾಗಿ ಕರಡು ಸಿದ್ದಪಡಿಸಿರುವ ಸರ್ಕಾರ ಇಂದು ರಾಜಭವನಕ್ಕೆ ಕಡತ ಸಲ್ಲಿಸಲಾಗಿದೆ. ಸಿಎಂ ಕಚೇರಿ ಸಿಬ್ಬಂದಿ ರಾಜಭವನಕ್ಕೆ ಕಡತ ಸಲ್ಲಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅನುಮೋದನೆ ಮಾಡಿದ ಬಳಿಕ ಈ ಕರಡು ಪ್ರತಿಯನ್ನು ರಾಜ್ಯಪಾಲರಿಗೆ ರವಾನೆ ಮಾಡಲಾಗಿದೆ. ಹೀಗಾಗಿ ಒಂದೆರಡು ದಿನದಲ್ಲಿ ಕರಡಿಗೆ ರಾಜ್ಯಪಾಲರ ಅಂಗೀಕಾರ ಸಿಗುವ ಸಾಧ್ಯತೆಯಿದೆ.
ಕರಡು ಸುಗ್ರೀವಾಜ್ಞೆಯಲ್ಲಿ ಏನೇನಿದೆ?
1.ಸಾಲ ವಸೂಲಿ ವೇಳೆ ಸಾಲಗಾರರಿಗೆ ಹಿಂಸೆ,ಹಲ್ಲೆ, ಅವಮಾನ ಮಾಡುವಂತಿಲ್ಲ.
2.ಇನ್ನು ಬಲವಂತವಾಗಿ ಸ್ಥಿರಾಸ್ತಿ, ದಾಖಲೆ ಕಸಿದು ದಬ್ಬಾಳಿಕೆ, ದೌರ್ಜನ್ಯ ಎಸಗುವಂತಿಲ್ಲ
3.ಸಾಲ ವಸೂಲಾತಿಗೆ ಗೂಂಡಾಗಳ ಬಳಕೆ,ಮನೆಗೆ ಭೇಟಿ ನೀಡುವುದು,ಬೆದರಿಕೆ ಹಾಕುವುದು ಗಂಭೀರ ಅಪರಾಧ
4.ಸಾಲಗಾರರ ದೈನಂದಿನ ಕೆಲಸಗಳಿಗೆ ಅಡ್ಡಿ ತೊಂದರೆ ನೀಡಿದರೆ ಲೈಸೆನ್ಸ್ ರದ್ದು
5.ಗ್ರಾಹಕರಿಂದ ಸ್ವೀಕರಿಸಿದ ಹಣಕ್ಕೆ ಅಧಿಕೃತ ಸಹಿ ಮಾಡಿದ ರಶೀದಿ ನೀಡುವುದು ಕಡ್ಡಾಯ
6.ಸಾಲ ಪಡೆದವರು ಬಡ್ಡಿ, ಕಂತು ಪಾವತಿ ವಿವರ ಕೇಳಿದರೆ ಸಂಸ್ಥೆಗಳು ಕೊಡಬೇಕು
7.ಮೈಕ್ರೋ ಫೈನಾನ್ಸ್ಗಳು ಕಡ್ಡಾಯವಾಗಿ ಸ್ಥಳೀಯ ಕಚೇರಿಯನ್ನು ಹೊಂದಿರಬೇಕು