ಬಿಜೆಪಿಯಲ್ಲಿ (Bjp) ಆಂತರಿಕವಾಗಿ ಕ್ಷಿಪ್ರ ಬೆಳವಣಿಗೆಗಳಾಗುತ್ತಿದ್ದು, ಸದ್ಯ ಈಗ ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿ ರೆಬಲ್ಸ್ (Bjp rebels ) ನಾಯಕರು ಇಂದು ದೆಹಲಿ ತಲುಪಿದ್ದಾರೆ.ಇಂದಿನಿಂದ ಮೂರು ದಿನಗಳ ಕಾಲ ದೆಹಲಿಯಲ್ಲೇ ಠಿಕಾಣಿ ಹೂಡಲು ರೆಬಲ್ಸ್ ನಿರ್ಧಾರ ಮಾಡಿದ್ದಾರೆ.
ಈ ಮೂಲಕ ತಮ್ಮ ಅಸಮಾಧಾನ ಮುಂದುವರೆಸಿದ್ದು, ದೆಹಲಿಯಲ್ಲಿ ಅಮಿತ್ ಶಾ (Amit sha) ಭೇಟಿಗಾಗಿ ಭಿನ್ನರ ತಂಡ ಕಸರತ್ತು ನಡೆಸಿದೆ. ಇಂದು ರಾಜ್ಯದ ಸಂಸದರು ಹಾಗೂ ಕೇಂದ್ರ ಸಚಿವರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಇನ್ನು ರಾಜ್ಯಾಧ್ಯಕ್ಷ ಬದಲಾವಣೆ ವಿಚಾರವಾಗಿ ಭಿನ್ನರ ತಂಡದಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರು ಸ್ಪರ್ಧೆ ಮಾಡಬೇಕು ಎಂಬುದು ದೆಹಲಿಯಲ್ಲೇ ಕುಳಿತು ರೆಬಲ್ಸ್ ನಾಯಕರು ಚರ್ಚೆ ಮಾಡಲಿದ್ದಾರೆ.ಆ ಬಳಿಕ ಅಮಿತ್ ಶಾ (Amit sha) ಮತ್ತು ಜೆ.ಪಿ ನಡ್ಡಾ (JP Nadda) ಅವರನ್ನು ಭೇಟಿ ವೇಳೆ ಪ್ರಸ್ತಾಪ ಮಾಡಲು ರೆಬಲ್ಸ್ ನಾಯಕರ ಪ್ಲಾನ್ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.