ಕೇವಲ ರಾಜ್ಯ ಮಾತ್ರವಲ್ಲದೆ.. ಒಟ್ಟಾರೆ ದೇಶದಾದ್ಯಂತ ಚರ್ಚೆಗೆ ಕಾರಣವಾಗಿರುನ ವಕ್ಫ್ ತಿದ್ದುಪಡಿ ಮಸೂದೆಯನ್ನು (Ward amendment act) ಪರಿಶೀಲಿಸುವ ಸಂಸತ್ತಿನ ಜಂಟಿ ಸಮಿತಿಯ ವರದಿಯನ್ನು ಲೋಕಸಭೆಯಲ್ಲಿ (Lok sabha) ಇಂದು ಮಂಡಿಸಲಿದೆ.
ಈ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ (Jagadambika pal) ಹಾಗೂ ಸದಸ್ಯ ಸಂಜಯ್ ಜೈಸ್ವಾಲ್ (Sanjay jaiswal) ಇಂದು ವರದಿಯನ್ನು ಮಂಡಿಸಲಿದ್ದಾರೆ ಅಂತ ಲೋಕಸಭಾ ಸಚಿವಾಲಯ ಹೊರಡಿಸಿದ ಬುಲೆಟಿನ್ನಲ್ಲಿ ತಿಳಿಸಿದೆ. ಸಮಿತಿ ಕಳೆದ ಗುರುವಾರ ಗುರುವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾಗೆ ವರದಿ ಸಲ್ಲಿಸಿತ್ತು.
ಆಡಳಿತಾರೂಢ ಪಕ್ಷದ ಸದಸ್ಯರು ಸೂಚಿಸಿದ ಬದಲಾವಣೆಗಳನ್ನು ಒಳಗೊಂಡಿರುವ ತನ್ನ ವರದಿಯನ್ನು ಸಮಿತಿ ಬಹುಮತದ ಮತದಿಂದ ಅಂಗೀಕರಿಸಿತ್ತು. ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿರೋಧ ಪಕ್ಷಗಳು ಈ ಪ್ರಕ್ರಿಯೆಯನ್ನು ವಕ್ಫ್ ಮಂಡಳಿಗಳನ್ನು ನಾಶಮಾಡುವ ಪ್ರಯತ್ನ ಅಂತ ಟೀಕಿಸಿದ್ದವು.