ಭಾರತ ಅಂಡರ್ 19 ವನಿತೆಯರ ಕ್ರಿಕೆಟ್ ತಂಡ ಸತತ 2ನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದಿದೆ. ಈ ಹಿಂದೆ ಚೊಚ್ಚಲ ವಿಶ್ವಕಪ್ ಗೆದ್ದು ಬೀಗಿದ್ದ ಕಿರಿಯರ ತಂಡ, ಇದೀಗ ಎರಡನೇ ಆವೃತ್ತಿಯಲ್ಲೂ ಗೆದ್ದು ಚಾಂಪಿಯನ್ ಪಟ್ಟ ಉಳಿಸಿಕೊಂಡಿದೆ. ಮಲೇಷ್ಯಾದ ರಾಜಧಾನಿ ಕೌಲಾಲಂಪುರದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ-ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ವು. ಹರಿಣಗಳ ವಿರುದ್ಧ 9 ವಿಕೆಟ್ಗಳಿಂದ ಭರ್ಜರಿಯಾಗಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ನಿಗದಿತ 20 ಓವರ್ಗಳಲ್ಲಿ ಆಲೌಟ್ ಆಗಿ ಕೇವಲ 82 ರನ್ಗಳನ್ನು ಮಾತ್ರ ಗಳಿಸಿತು. ಭಾರತದ ಪರ ಬೌಲರ್ಸ್ ಮಿಂಚಿನ ಬೌಲಿಂಗ್ ಮಾಡಿ ಆಫ್ರಿಕಾ ತಂಡವನ್ನು ಹೆಡೆಮುರಿ ಕಟ್ಟಿದ್ರು. ತಂಡದ ಪರ ಗೊಂಗಡಿ ತ್ರಿಷಾ 3 ವಿಕೆಟ್ ಪಡೆದ್ರೆ, ಆಯುಷಿ ಶುಕ್ಲಾ, ಪರುಣಿಕಾ ಸಿಸೋಡಿಯಾ, ವೈಷ್ಣವಿ ಶರ್ಮಾ ತಲಾ 2 ವಿಕೆಟ್ ಪಡೆದರು.
ಕೇವಲ 83 ರನ್ಗಳ ಸುಲಭ ಗುರಿ ಬೆನ್ನತ್ತಿದ ಟೀಮ್ ಇಂಡಿಯಾದ ಯುವತಿಯರು, 1 ವಿಕೆಟ್ ಕಳೆದುಕೊಂಡು ಜಯಭೇರಿ ಭಾರಿಸಿದ್ರು. ಬೌಲಿಂಗ್ನಲ್ಲೂ ಮಿಂಚಿದ್ದ ತ್ರಿಷಾ, ಬ್ಯಾಟಿಂಗ್ನಲ್ಲೂ 8 ಫೋರ್ ಸಮೇತ 44 ರನ್ ಸಿಡಿಸಿದರು. ಸಾನಿಕಾ ಚಲ್ಕೆ 26 ರನ್ ಗಳಿಸಿ ತಂಡದ ಗೆಲುವಿಗೆ ತಮ್ಮ ಕಾಣಿಕೆ ನೀಡಿದರು. 11.2 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 84 ರನ್ ಗಳಿಸುವ ಮೂಲಕ ಭಾರತ ಗೆಲುವಿನ ನಗೆ ಬೀರಿತು.
ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಕೊನೆ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ದಾಖಲೆಯ ದಿಗ್ವಿಜಯ ಸಾಧಿಸಿದೆ. ಬರೋಬ್ಬರಿ 150 ರನ್ಗಳ ಜಯ ಗಳಿಸಿದೆ. ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಟೀಂ ಇಂಡಿಯಾ ಅಭಿಷೇಕ್ ವಿಶ್ವದಾಖಲೆ ಶತಕದೊಂದಿಗೆ 247 ರನ್ ಗಳಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್10.3 ಓವರ್ಗಳಲ್ಲಿ ಕೇವಲ 97 ರನ್ಗೆ ಆಲೌಟ್ ಆಗಿದೆ.ಈ ಗೆಲುವಿನೊಂದಿಗೆ ಟೀಂ ಇಂಡಿಯಾ 4-1 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ.
ಕೊನೆ ಒಂದ್ಯದ ಹೀರೋ ಅಭಿಷೇಕ್ ಶರ್ಮಾ. ಕೇವಲ 37 ಎಸೆತಗಳಲ್ಲಿ ಶತಕ ಬಾರಿಸಿದ ಅಭಿಷೇಕ್ ಶರ್ಮಾ, ಅತಿ ವೇಗದ ಶತಕ ಬಾರಿಸಿದ 3ನೇ ಆಟಗಾರನಾದರು. ರೋಹಿತ್ ಶರ್ಮಾ & ಡೇವಿಡ್ ಮಿಲ್ಲರ್ 35 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಹಾಗೇ ಟಿ-20ನಲ್ಲಿ ಭಾರತದ ಪರ ಅತಿ ಹೆಚ್ಚು ಸಿಕ್ಸರ್ ಅಂದರೆ 13 ಸಿಕ್ಸರ್ ಬಾರಿಸಿದ್ದರು ಅಭಿಷೇಕ್. ಅಷ್ಟೇ ಅಲ್ಲ ಟಿ-20ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಅಂದರೆ 135 ಬಾರಿಸಿದ ದಾಖಲೆ ಅಭಿಷೇಕ್ ಶರ್ಮಾ ಪಾಲಾಯ್ತು.