ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ಕುರ್ಚಿ ಕಳೆದುಕೊಳ್ತಾರೆ ಅಂತಾ ವಿಪಕ್ಷ ನಾಯಕ ಆರ್ ಅಶೋಕ್ ಭವಿಷ್ಯ ನುಡಿದಿದ್ದಾರೆ. ನವೆಂಬರ್ಗೆ ಮ್ಯೂಸಿಕಲ್ ಚೇರ್ ವಿಸೆಲ್ ಬರುತ್ತದೆ. ನವೆಂಬರ್ 15, 16ಕ್ಕೆ ಸಿಎಂ ಬದಲಾವಣೆ ಆಗುತ್ತದೆ. ಡಿ.ಕೆ ಶಿವಕುಮಾರ್ ಕುರ್ಚಿಯನ್ನು ಒದ್ದು ಕಿತ್ಕೋಳ್ತಾರೆ. ಹಾಗೆ ಹೇಳಿದ್ದಾರೆ. ನಮಗೂ ಎಲ್ಲಾ ಗೊತ್ತಿರುತ್ತೆ. ನಿಖರವಾಗಿ ನಾನು ಹೇಳ್ತಾ ಇದ್ದೇನೆ, ಅಮಾವಾಸ್ಯೆ, ಪೌರ್ಣಿಮೆ ಇದ್ರೆ ಡಿ.ಕೆ ಶಿವಕುಮಾರ್ ಅಧಿಕಾರ ತಗೋಳಲ್ಲ ಎಂದಿದ್ದಾರೆ.
ನಾವು 5 ಗ್ಯಾರಂಟಿ ತರ್ತೀವಿ, ಆದರೆ ಯಾವ ತೆರಿಗೆ ಹಾಕಲ್ಲ ಅಂದಿದ್ರು. ಆದರೆ ಸಿಎಂ ಸಿದ್ದರಾಮಯ್ಯ ಗಂಟು ಮೂಟೆ ಕಟ್ಟಿಕೊಂಡು ಎದ್ದು ಹೋಗುವ ಸಮಯ ಬರ್ತಿದೆ ಎಂದಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರ ಹೋರಾಟದಲ್ಲಿ ಭಾಗಿಯಾಗಿ ಮಾತನಾಡಿದ ಅಶೋಕ್, ನವೆಂಬರ್ನಲ್ಲಿ ಸಿದ್ದರಾಮಯ್ಯ ಗಂಟು ಮೂಟೆ ಕಟ್ತಾರೆ. ಹೋಗುವಾಗ ಒಳ್ಳೆಯ ಕೆಲಸ ಮಾಡಿ ಅಂತ ಸಿದ್ದರಾಮಯ್ಯಗೆ ಕಿವಿ ಮಾತು ಹೇಳ್ತೀನಿ. ಒಳಿತು ಮಾಡು ಸಿದ್ದಣ್ಣ ಅಂತ ಹಾಡಿನ ಮೂಲಕ ಅಶೋಕ್ ವ್ಯಂಗ್ಯ ಮಾಡಿದ್ದಾರೆ.
ಸಿದ್ದರಾಮಯ್ಯ ನವೆಂಬರ್ಗೆ ಕುರ್ಚಿ ಕಳೆದುಕೊಳ್ತಾರೆ ಅನ್ನೋ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟಿದ್ದಾರೆ. ಬಿಜೆಪಿಯವರು ಮೊದಲು ತಮ್ಮ ಕುರ್ಚಿ ನೋಡಿಕೊಳ್ಳಲಿ. ಸಂಕ್ರಾಂತಿಗೆ ಸಿಎಂ ಬದಲಾಗ್ತಾರೆ ಅಂತಾರೆ. ಅಶೋಕ್ ಇನ್ನೊಂದು ರೀತಿ ಹೇಳ್ತಾರೆ ಅನ್ನೋ ಮೂಲಕ ವಿಜಯೇಂದ್ರ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.
ನಮ್ಮ ಸರ್ಕಾರದ ಬಗ್ಗೆ ಮಾತನಾಡೋ ಮೊದಲು, ಅವರ ಕುರ್ಚಿ ನೋಡಿಕೊಳ್ಳಲಿ. ಸದ್ಯ ಸಿದ್ಧರಾಮಯ್ಯ ಅವರು ಸಿಎಂ ಇದ್ದಾರೆ. ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಆಗಿದ್ದಾರೆ. ಹೀಗಿರುವಾಗ ದಲಿತ ಸಿಎಂ ಪ್ರಶ್ನೆ ಬರಲ್ಲ. ಈ ಕುರಿತ ಹೈಕಮಾಂಡ್ ಕೂಡ ಸ್ಪಷ್ಟ ಸಂದೇಶ ಕೊಟ್ಟಿದೆ. ಎಲ್ಲರಿಗೂ ಅವರವರ ಜವಾಬ್ದಾರಿ ಕೊಟ್ಟಿದೆ. ಸಿಎಂ ರನ್ನು ಬದಲಾಯಿಸ್ತಾರೆ ಅಂತ ಯಾರು ಹೇಳಿದರು..? ಹೈಕಮಾಂಡ್ ಹೇಳಿದೆಯಾ..? ಸಿದ್ಧರಾಮಯ್ಯ ಹೇಳಿದ್ದಾರಾ..? ಎಂದು ಪ್ರಶ್ನೆ ಮಾಡಿದ್ದಾರೆ.