ಇಂದು ಕೇಂದ್ರ ಸರ್ಕಾರದ (Central government) ಮೂರನೇ ಅವಧಿಯ ಮೊದಲ ಪೂರ್ಣ ಬಜೆಟ್ (Union budget 2025) ಮಂಡನೆಯಾಗಲಿದ್ದು, ಈ ಬಜೇಟ್ ಮೇಲೆ ದೇಶದಾದ್ಯಂತ ಜನಸಾಮಾನ್ಯರ ಬಾರಿ ನಿರೀಕ್ಷೆಗಳಿದೆ. ವೈಯಕ್ತಿಕ ಆದಾಯ ತೆರಿಗೆಯಲ್ಲಿ (Income tax) ಮಧ್ಯಮ ವರ್ಗಕ್ಕೆ ಒಂದಷ್ಟು ರಿಯಾಯಿತಿ ನೀಡುವ ಉದ್ದೇಶದಿಂದ ಹೊಸ ತೆರಿಗೆ ಸ್ಲಾಬ್‌ಗಳನ್ನು ಸರ್ಕಾರ ಪರಿಚಯಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ಪ್ರಮುಖವಾಗಿ ಆದಾಯ ತೆರಿಗೆಯಲ್ಲಿ ವಿನಾಯಿತಿ ಮಿತಿಯನ್ನು ಹೆಚ್ಚಿಸುವ ಮೂಲಕ ಹಣದುಬ್ಬರಕ್ಕೆ ಪರಿಹಾರ ಕಂಡುಕೊಳ್ಳಬಹುದು ಎಂಬ ನಿರೀಕ್ಷೆಯಿದೆ. ಇನ್ನು ಆದಾಯ ತೆರಿಗೆಗೆ ಕನಿಷ್ಠ ₹10ಲಕ್ಷ ಮಿತಿ ಅಳವಡಿಸಿಕೊಳ್ಳಬೇಕು. ₹15 ಲಕ್ಷ ವರೆಗಿನ ಆದಾಯಕ್ಕೆ ವಿನಾಯಿತಿ ನೀಡಬೇಕು ಎಂಬ ನಿರೀಕ್ಷೆಯಿದೆ .
ಇನ್ನು ಎರಡನೆಯದಾಗಿ ಹೂಡಿಕೆ ಮೇಲಿನ ತೆರಿಗೆಗಳು,ಭಾರತೀಯ ಷೇರು ಮಾರುಕಟ್ಟೆ ಮತ್ತು ವಿದೇಶಿ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ, ಹಾಗೆಯೇ ಚಿನ್ನದ ಮೇಲಿನ ನಿರಂತರ ಹೂಡಿಕೆಯಿಂದ ಸಿಗುವ ಲಾಭಕ್ಕೆ ತೆರಿಗೆ ಪ್ರಮಾಣ ತಗ್ಗಿಸಬೇಕು ಎಂಬ ನಿರೀಕ್ಷೆಗಳು ಹೆಚ್ಚಿವೆ.

ಈ ಜೊತೆಗೆ ಹಿರಿಯ ನಾಗರಿಕರ ಮೇಲಿನ ಆರ್ಥಿಕ ಹೊರೆ ತಗ್ಗಿಸಬೇಕು,ಹಿರಿಯ ನಾಗರಿಕರ ಮೇಲಿನ ಹಣಕಾಸಿನ ಒತ್ತಡ ತಗ್ಗಿಸಲು ಅವರಿಗೆ ಹೆಚ್ಚಿನ ವಿನಾಯಿತಿ ನೀಡಬೇಕು ಎಂಬ ಬೇಡಿಕೆಯೂ ಜನಮಾನಸದಲ್ಲಿದೆ.
ಇನ್ನು ಮನೆ ಹೊಂದಿದವರಿಗೆ ಪ್ರೋತ್ಸಾಹ ಸೆಕ್ಷನ್ 24(ಬಿ) ಅಡಿಯಲ್ಲಿ ಗೃಹ ಸಾಲಕ್ಕೆ ಇದ್ದ ಹೆಚ್ಚುವರಿ ತೆರಿಗೆ ಕಡಿತದ ಮಿತಿಯ ಲಾಭ ಮನೆ ಖರೀದಿಸುವವರಿಗೂ ಸಿಗಬೇಕು, ಕನಿಷ್ಠ ಒಂದು ಮನೆಗಾದರೂ, ಸಂಪೂರ್ಣ ಬಡ್ಡಿ ಪಾವತಿಸುವವರಿಗೆ ರಿಯಾಯಿತಿ ಮಿತಿಯನ್ನು ಹೆಚ್ಚಿಸಬೇಕು ಎಂಬ ನಿರೀಕ್ಷೆಗಳಿವೆ.
ಇನ್ನುಳಿದಂತೆ ಗೃಹ ಸಾಲ ಪಡೆದವರಿಗೆ ಆದಾಯ ತೆರಿಗೆಗೆ ನೀಡುವ ವಿನಾಯಿತಿಯ ಮಿತಿ ₹2 ಲಕ್ಷಕ್ಕಿದ್ದು, ಇದನ್ನು ₹3 ಲಕ್ಷಕ್ಕೆ ಹೆಚ್ಚಿಸಬೇಕು ಎಂಬ ಬೇಡಿಕೆಯಿದೆ.

80ಸಿ ಅಡಿಯಲ್ಲಿ ಮಿತಿ ಹೆಚ್ಚಳದ ನಿರೀಕ್ಷೆ, ಸದ್ಯ ಇರುವ ₹1.5 ಲಕ್ಷ ಮಿತಿ 2014ರಿಂದ ಬದಲಾಗಿಲ್ಲ. ನಿಶ್ಚಿತ ಠೇವಣಿ, ಪಿಪಿಎಫ್ ಇತ್ಯಾದಿ ಹೂಡಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಇದು ಅವಶ್ಯಕ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಎನ್‌ಪಿಎಸ್ ಕಡಿತ ಮಿತಿ ಹೆಚ್ಚಿಸಬೇಕು, ಹೊಸ ಪಿಂಚಣಿ ವ್ಯವಸ್ಥೆಯಲ್ಲಿ ಗರಿಷ್ಠ ಕಡಿತ ಮಿತಿಯನ್ನು ಈಗಿರುವ ₹50 ಸಾವಿರದಿಂದ ₹1 ಲಕ್ಷಕ್ಕೆ ಹೆಚ್ಚಿಸಬೇಕು,ಅದಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಬೇಕು,ಆದಾಯ ತೆರಿಗೆ ಸ್ಲಾಬ್‌ನಲ್ಲಿ ಬದಲಾವಣೆ ನಿರೀಕ್ಷೆಗಳು ಹೆಚ್ಚಾಗಿವೆ.