
ಮೈಸೂರು: ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ಕಾಲ್ತುಳಿತ ಪ್ರಕರಣದ ಬಗ್ಗೆ ಮೈಸೂರಿನಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಮಾತನಾಡಿದ್ದು, ಬೆಳಗ್ಗಿನ ಜಾವ ನಡೆದಿರುವ ಘಟನೆ ಎಲ್ಲರಿಗೂ ನೋವು ತಂದಿದೆ. ಮೊದಲೇ ನಿರೀಕ್ಷೆ ಇತ್ತು. ಇವತ್ತು ಶ್ರೇಷ್ಟವಾದ ದಿನ ಎನ್ನುವ ಭಾವನೆ ಎಲ್ಲರಿಗೂ ಇದೆ. ಅದಕ್ಕಾಗಿ ಅಲ್ಲಿ ಸ್ನಾನ ಮಾಡಿದ್ರೆ ಪಾಪಕರ್ಮ ಹೋಗುತ್ತೆ ಅನ್ನೋ ಭಾವನೆ ಜನರಲ್ಲಿದೆ. ಅದಕ್ಕಾಗಿ ದಾಖಲೆ ಪ್ರಮಾಣದಲ್ಲಿ ಜನ ಹೋಗಿದ್ದಾರೆ. ಎಲ್ಲ ರೀತಿಯ ಮುಂಜಾಗ್ರತಾ ಕ್ರಮವನ್ನು ಸರ್ಕಾರ ತೆಗೆದುಕೊಂಡಿದೆ.

ಉತ್ತರ ಪ್ರದೇಶ ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಂಡರೂ ಅಚಾತುರ್ಯದಿಂದ ಈ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವ್ರು ಹೇಳಿದ್ದಾರೆ. ದೊಡ್ಡ ಮಟ್ಟದ ಮುಂಜಾಗ್ರತಾ ಕ್ರಮ ವಹಿಸಿ ಅಂತ ಯೋಗಿ ಆದಿತ್ಯನಾಥ್‌ಗೆ ಹೇಳಿದ್ದಾರೆ. ಮಹಾಕುಂಭದಲ್ಲಿ ಅದ್ಭುತವಾಗಿ ಎಲ್ಲವನ್ನೂ ಮಾಡಲಾಗಿತ್ತು. ಈ ಬಗ್ಗೆ ಜನರೇ ಮಾತನಾಡುತ್ತಿದ್ದಾರೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ ತೊಂದರೆ ಆಗಿದೆ. ಮೊದಲೇ ಕೂಡ ಮನವಿ ಮಾಡಲಾಗಿತ್ತು. ಆದರೂ ಕೂಡ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೋಗಿರುವಾಗ ಘಟನೆ ಆಗಿದೆ. ಇದು ಆಗಬಾರದಗಿತ್ತು ಆಗಿದೆ ಎಂದಿದ್ದಾರೆ ಕೇಂದ್ರ ಸಚಿವ ಕುಮಾರಸ್ವಾಮಿ.
ಯಾರಿಗೆ ಸಮಸ್ಯೆ ಆಗಿದ್ರು ನನ್ನನ್ನು ಸಂಪರ್ಕ ಮಾಡಲು ಹೇಳಿದ್ದೇನೆ. ಮಾಧ್ಯಮದ ಮೂಲಕ ಮತ್ತೆ ಮನವಿ ಮಾಡುತ್ತೇನೆ, ನಮ್ಮ ಅಧಿಕಾರಿಗಳಿಗೂ ಕೂಡ ಹೇಳಿದ್ದೇನೆ. ನಮ್ಮ ಕಚೇರಿಯ ನಂಬರ್ ಕೂಡ ನೀಡಲಾಗಿದೆ. ರಾಜ್ಯದ ಜನರ ನೆರವಿಗೆ ನಾವು ಧಾವಿಸುತ್ತೇನೆ ಎಂದಿದ್ದಾರೆ ಕುಮಾರಸ್ವಾಮಿ. ಪುಣ್ಯಸ್ನಾನದ ಬಗ್ಗೆ ಕಾಂಗ್ರೆಸ್ ಟೀಕೆ ವಿಚಾರಕ್ಕೆ ಮಾತನಾಡಿ, ಕಾಂಗ್ರೆಸ್ ಅವರಿಗೆ ಟೀಕೆ ಮಾಡೋದೆ ಕೆಲಸ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಬಳಕೆ ಮಾಡಿದ ಪದ ಸರಿಯಿಲ್ಲ. ಕಾಂಗ್ರೆಸ್‌ಗೆ ನಮ್ಮ ಧಾರ್ಮಿಕ ಆಚರಣೆಗಳ ಮೇಲೆ ನಂಬಿಕೆ ಇಲ್ಲ. ಅದಕ್ಕೆ ಈ ರೀತಿ ಮಾತನಾಡುತ್ತಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ ಕುಮಾರಸ್ವಾಮಿ.

ಬೆಳಗಾವಿಯಲ್ಲಿ ಜೈ ಬಾಪು ಅಂತ ಕಾರ್ಯಕ್ರಮ ಮಾಡಿದ್ರು. ಗಾಂಧೀಜಿಯವರ ಹೆಸರಿನಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಿ, ಈಗ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಗಾಂಧೀಜಿ ಮೇಲೆ ಅವರಿಗೆ ನಂಬಿಕೆ ಇದ್ದಿದ್ರೆ ಈ ತರಹ ಮಾತುಗಳು ಬರುತ್ತಿರಲಿಲ್ಲ ಎಂದಿದ್ದಾರೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ.
