• Home
  • About Us
  • ಕರ್ನಾಟಕ
Friday, August 22, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ..

ಪ್ರತಿಧ್ವನಿ by ಪ್ರತಿಧ್ವನಿ
January 29, 2025
in Top Story, ಇದೀಗ, ರಾಜಕೀಯ, ವಿದೇಶ, ವಿಶೇಷ
0
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ..
Share on WhatsAppShare on FacebookShare on Telegram

BJP ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಸಂಸದ ಡಾ ಡಿ ಸುಧಾಕರ್‌ ವಾಗ್ದಾಳಿ ಮಾಡಿದ್ದಾರೆ. ನಮ್ಮ ಬಿಜೆಪಿ ಪಕ್ಷವನ್ನು ನಂಬಿ, ಆಂತರಿಕ ಪ್ರಜಾಪ್ರಭುತ್ವ ಇಲ್ಲಿದೆ, ರಾಷ್ಟ್ರೀಯತೆ ಇದೆ, ರಾಷ್ಟ್ರೀಯ ಸ್ವಯಂ ಸಂಘದ ಆದರ್ಶ ಇದೆ ಅಂತಾ ಪಕ್ಷದ ತತ್ವ ಸಿದ್ದಾಂತ ಒಪ್ಪಿಕೊಂಡು 2019ರಲ್ಲಿ ಬಿಜೆಪಿ ಸೇರಿದ್ದೆ. ಬಿಜೆಪಿಗೆ‌ ಮರಳು ಭೂಮಿಯ ವಾತಾವರಣ ಚಿಕ್ಕಬಳ್ಳಾಪುರದಲ್ಲಿತ್ತು. ಆದರೂ ನಾನು ಇಡೀ ರಾಜಕೀಯ ಭವಿಷ್ಯವನ್ನು ಒತ್ತೆ ಇಟ್ಟು ಬಿಜೆಪಿ ಸೇರಿದ್ದೆ. ಮಾನ್ಯ ಯಡಿಯೂರಪ್ಪ ನವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕೆಂದು.

ADVERTISEMENT

ಅವತ್ತಿನ ಸಂದರ್ಭದಲ್ಲಿ ಸೆಲ್ಫ್‌‌ ರೆಸ್ಪೆಕ್ಟ್‌ಗಾಗಿ ಹೋರಾಟ ಮಾಡಿ ಈ ಪಕ್ಷಕ್ಕೆ ಬಂದಿದ್ದೆ. ಆಮೇಲೆ ಯಡಿಯೂರಪ್ಪ ಅವರು ಸಿಎಂ ಆದ್ರು. ಅವರ ಅನುಯಾಯಿಗಳ ರೀತಿ ಅವರ ಸೂಚನೆಯಂತೆ ನಾನು ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಅವರು ರಾಜೀನಾಮೆ ಕೊಟ್ಟ ನಂತರ ಬೊಮ್ಮಾಯಿ ಅವರನ್ನು ಸಿಎಂ ಆಗಿ ನೇಮಕ ಮಾಡಿದ್ರು. ಅವರ ಜೊತೆಗೂ ನಾನು‌ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿಕೊಂಡು ಬಂದಿದ್ದೇನೆ. ಸೋಲೇ ಇಲ್ಲದೇ ಇರುವ ನನಗೆ, ಪಕ್ಷದ ನೆಲೆಯೇ ಇಲ್ಲದೆ ಇರುವ ಕಡೆ ನನಗೆ ಒಂದು ಸಾರಿ ಆಘಾತ ಆಯ್ತು. ಇವತ್ತು ಪಕ್ಷ ಕಟ್ಟಬೇಕು ಅಂತಾ ಹೊರಟಿರುವುರು ನಮ್ಮ ಹದಿನೈದು ಜನರನ್ನು ಸೋಲಿಸುವ ಕೆಲಸ ಆಯ್ತು ಎಂದು ಟೀಕಿಸಿದ್ದಾರೆ.

ಇವತ್ತು ಪಕ್ಷದಲ್ಲಿ ಸಂಘಟನಾತ್ಮಕವಾಗದ ನೇಮಕಾತಿಗಳು ನಡೆಯುತ್ತಿವೆ. ಸ್ವಜನ ಪಕ್ಷಪಾತಕ್ಕೆ ಮಣೆ ಹಾಕೋದಿಲ್ಲ, ಕುಟುಂಬ ರಾಜಕಾರಣಕ್ಕೆ ಅವಕಾಶ ಇಲ್ಲ ಎಂದು ನಾನು ನಂಬಿದ್ದೆ. ಬಿ.ಎಲ್‌ ಸಂತೋಷ್, ಪ್ರಹ್ಲಾದ್ ಜೋಷಿ, ಆರ್‌. ಅಶೋಕ್, ಬಸವರಾಜ ಬೊಮ್ಮಾಯಿಯವರ ಆಶೀರ್ವಾದ ಇದೆ. ಪಕ್ಷದ ಚುನಾವಣೆಗಳು ಆದರೆ ಸಂವಿಧಾನ ಬದ್ದವಾಗಿ ಆಗಬೇಕು. ಆಂತರಿಕ ಪ್ರಜಾಪ್ರಭುತ್ವಕ್ಕೆ ಮನ್ನಣೆ ಕೊಡಬೇಕು. ಆದರೆ ಯಾವುದೇ ಚುನಾವಣೆಯನ್ನು ಮಾಡಿಲ್ಲ. ಚಿಕ್ಕಬಳ್ಳಾಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಏಕ ಚಕ್ರಾಧಿಪತ್ಯದ ರೀತಿಯಲ್ಲಿ, ನನ್ನ ಹಿಂದೆ ಓಡಾಡುವ ಯೆಸ್ ಬಾಸ್, ಅನ್ನೋರನ್ನು ನೇಮಕ ಮಾಡಿಕೊಳ್ಳೋದು. ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರಾಗಿ ನೇಮಕ ಮಾಡಿಕೊಳ್ಳೋದು ಸರಿಯಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಮಿಸ್ಟರ್ ಬಿ.ವೈ ವಿಜಯೇಂದ್ರ ಅವರು ನನ್ನನ್ನು ರಾಜಕೀಯ ಸಮಾಧಿ ಮಾಡಲು ಹೊರಟಿದ್ದೀರಲ್ಲ, ವಿಜಯೇಂದ್ರ ಯಾರನ್ನು ವಿಶ್ವಾಸಕ್ಕೆ ತಗೊಂಡು ಹೋಗುತ್ತಿಲ್ಲ. ಇವರ ದರ್ಪ, ಅಹಂಕಾರ, ಕಾರ್ಯವೈಖರಿ, ಇವರ ಬಳಿ ಸಾವಿರಾರು ಕೋಟಿ ಇರಬಹುದೇನೋ ಗೊತ್ತಿಲ್ಲ. ಸೌಜನ್ಯಕ್ಕೆ ಆದರೂ ನನ್ನ ಜೊತೆ ವಿಜಯೇಂದ್ರ ಚರ್ಚೆ ಮಾಡಿಲ್ಲ. ನಾನು ಫೋನ್ ಮಾಡಿದ್ರು ರೆಸ್ಪಾಂಡ್ ಮಾಡಲ್ಲ, ಮೆಸೇಜ್‌ಗೂ ರಿಪ್ಲೇ ಮಾಡಲ್ಲ. ಭೇಟಿಗೂ ಅವಕಾಶ ಕೊಡಲ್ಲ ಎಂದಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿಗೆ ಅವಕಾಶ ಕೊಡ್ತಾರೆ. ಅರ್‌ಎಸ್‌ಎಸ್ ನಾಯಕರು ಕೂಡ ಭೇಟಿಗೆ‌ ಸಮಯ ಕೊಡ್ತಾರೆ. ಇವರು ಭೇಟಿಗೆ ಸಮಯ ಕೊಡಲ್ಲ ಎಂದಿದ್ದಾರೆ.

ನೀವು, ಬಿಜೆಪಿ ನಿಮ್ಮ ಸ್ವಂತ ಆಸ್ತೀನಾ..? ಬನ್ನಿ ನೋಡೋಣ, ಚಿಕ್ಕಬಳ್ಳಾಪುರದಲ್ಲಿ ಒಂದು ಸೀಟ್ ಗೆಲ್ಲಿಸಿ ನೋಡೋಣ ಎಂದು ಚಾಲೆಂಜ್ ಮಾಡಿದ್ದಾರೆ. ನಮ್ಮನ್ನು ತುಳಿಯೋಕೆ, ಸಮಾಧಿ ಮಾಡೋಕೆ‌ ಹೊರಟಿದ್ದೀರಾ..? ಹಿರಿಯ ಸಂಸದರಾದ‌ ಗೋವಿಂದ ಕಾರಜೋಳರನ್ನು ಒಡೆಯಲು ಹೋದವರನ್ನು ಅಧ್ಯಕ್ಷರಾಗಿ ಮಾಡಲು ಹೊರಟಿದ್ದೀರಿ. ಸಿಟಿ ರವಿ, ಬೊಮ್ಮಾಯಿ, ಯತ್ನಾಳ್, ರಮೇಶ್ ಜಾರಕಿಹೊಳಿ ಸೇರಿ ಯಾವ ಹಿರಿಯ ನಾಯಕರನ್ನು ಬಿಡುತ್ತಿಲ್ಲ. ರಮೇಶ್ ಜಾರಕಿಹೊಳಿಯನ್ನು ಮುಗಿಸಿದ್ರಿ. ನನ್ನ ಸಮಧಾನ ಮುಗೀತು, ಇನ್ನೂ ಏನಿದ್ರು ನಿಮ್ಮ ವಿರುದ್ಧ ಯುದ್ದ. ನೀವು ನೇಮಕ ಮಾಡಿರೋರು ರಿಯಲ್ ಎಸ್ಟೇಟ್‌ನಿಂದ ಸ್ವಲ್ಪ ದುಡ್ಡು ತಂದು ಕೊಡಬಹುದು. ಆದರೆ ಅವರಿಂದ ಪಕ್ಷ ಗೆಲ್ಲಲು ಸಾಧ್ಯವಾಗೋದಿಲ್ಲ. ನನ್ನನ್ನು ಸೋಲಿಸಲು ಕಾರಣರಾದ ಸಂದೀಪ್ ರೆಡ್ಡಿಯನ್ನು ಅಧ್ಯಕ್ಷರಾಗಿ ಮಾಡಿದ್ದೀರಿ ಎಂದು ವಿಜಯೇಂದ್ರ ವಿರುದ್ಧ ಹಿಗ್ಗಾಮುಗ್ಗಾ‌ ವಾಗ್ದಾಳಿ ಮಾಡಿದ್ದಾರೆ.

ಬಿಜೆಪಿಯಲ್ಲಿರುವ ಎಲ್ಲಾ‌ ಹಿರಿಯರನ್ನು ಮುಗಿಸುವ ಕೆಲಸ ಮಾಡ್ತಿದ್ದೀರಿ, ನಾನು ಈಗಾಗಲೇ ಕೇಂದ್ರದ ನಾಯಕರ ಗಮನಕ್ಕೆ‌ ತಂದಿದ್ಣೇನೆ. ಯಾವುದೇ ಕಾರಣಕ್ಕೂ ಇದನ್ನು ನಾನು ಸುಮ್ಮನೆ ಬಿಡುವುದಿಲ್ಲ. ಈಗಾಗಲೇ ಅಗರ್ ವಾಲಾ ರವರು ನನ್ನ ಜೊತೆ ಮಾತಾಡಿದ್ದಾರೆ. ನಿಮಗೆ ಅನ್ಯಾಯ ಆಗೋಕೆ ಬಿಡಲ್ಲ ಅಂತಾ ಹೇಳಿದ್ದಾರೆ. ಕೋರ್ ಕಮಿಟಿಯಲ್ಲಿ‌ ಚಿಕ್ಕಬಳ್ಳಾಪುರ ಸೇರಿ 13 ಜಿಲ್ಲೆಗಳ ಆಯ್ಕೆ ಬಗ್ಗೆ ನೀವು ಪ್ರಸ್ತಾಪನೇ ಮಾಡಿಲ್ಲ. ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾ‌ರನ್ನು ಭೇಟಿಯಾಗುತ್ತೇನೆ. ಇವರ ಎಲ್ಲಾ ಬಂಡವಾಳ ವನ್ನು‌ ಅಮಿತ್ ಶಾ‌ ಬಳಿ‌ ಬಿಚ್ಚಿಡ್ತೀನಿ. ನಿಮ್ಮದು‌ ಹಠ ಮತ್ತೆ ದ್ವೇಷದ ರಾಜಕಾರಣ. ಜನರ ಜೊತೆ ಇರುವ ಒಬ್ಬ ನಾಯಕನನ್ನು ವಿಶ್ವಾಸಕ್ಕೆ ತಗೊಳ್ಳುವ ಕೆಲಸ ಮಾಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

Tags: BJPCongress PartyK Sudhakarನರೇಂದ್ರ ಮೋದಿಬಿಜೆಪಿ
Previous Post

ಪುಟ್ಟ ಕಂದಮ್ಮಗಳ ಮೈ ಮೇಲಿರುವ ಕೂದಲನ್ನು ಹೋಗಲಾಡಿಸಲು, ಈ ಹೋಮ್ ರೆಮಿಡಿ ಟ್ರೈ ಮಾಡಿ.!

Next Post

ಮಹಾಕುಂಭ ಮೇಳದಲ್ಲಿ ಕಾಲ್ತುಳಿತ.. ಸಾವು ನೋವಿನ ಸಂಖ್ಯೆ ಇನ್ನೂ ಅಸ್ಪಷ್ಟ..

Related Posts

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!
Top Story

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

by ಪ್ರತಿಧ್ವನಿ
August 21, 2025
0

ಅಂದು ಮೈಸೂರಿನ ಮೂಡಾ ( MUDA ) ಭೂ ಹಗರಣಕ್ಕೆ ಸಿದ್ದರಾಮಯ್ಯ ಗೆ ಸಂಕಷ್ಟ ತಂದಿದ್ದ ಸ್ನೇಹಮಹಿ ಕೃಷ್ಣ ಇದೀಗ ಧರ್ಮಸ್ಥಳ ಗ್ರಾಮದ ಪ್ರಕರಣಕ್ಕೆ ಮತ್ತೆ ಎಂಟ್ರಿ...

Read moreDetails

ಸದನದಲ್ಲಿ ಶರಣಗೌಡ ಕಂದಕುರ್ ಗಂಭೀರ ಆರೋಪ..!

August 21, 2025

ದರ್ಶನ್‌ ಮತ್ತೆ ಜೈಲ್‌ಗೆ ಹೋಗಲು ಆ ಪ್ರಭಾವಿ ಮಂತ್ರಿಗಳು ಕಾರಣ..?

August 21, 2025

ಮಾತ್ನಾಡಲು ಅವಕಾಶ ಕೊಡದಿದ್ದಕ್ಕೆ ಸ್ಪೀಕರ್ ಮೇಲೆನೇ ಸಿಡಿದ ಶಿವಲಿಂಗೇಗೌಡ

August 21, 2025
ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ

ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ

August 21, 2025
Next Post
ಮಹಾಕುಂಭ ಮೇಳದಲ್ಲಿ ಕಾಲ್ತುಳಿತ.. ಸಾವು ನೋವಿನ ಸಂಖ್ಯೆ ಇನ್ನೂ ಅಸ್ಪಷ್ಟ..

ಮಹಾಕುಂಭ ಮೇಳದಲ್ಲಿ ಕಾಲ್ತುಳಿತ.. ಸಾವು ನೋವಿನ ಸಂಖ್ಯೆ ಇನ್ನೂ ಅಸ್ಪಷ್ಟ..

Recent News

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!
Top Story

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

by ಪ್ರತಿಧ್ವನಿ
August 21, 2025
Top Story

ಸದನದಲ್ಲಿ ಶರಣಗೌಡ ಕಂದಕುರ್ ಗಂಭೀರ ಆರೋಪ..!

by ಪ್ರತಿಧ್ವನಿ
August 21, 2025
Top Story

ದರ್ಶನ್‌ ಮತ್ತೆ ಜೈಲ್‌ಗೆ ಹೋಗಲು ಆ ಪ್ರಭಾವಿ ಮಂತ್ರಿಗಳು ಕಾರಣ..?

by ಪ್ರತಿಧ್ವನಿ
August 21, 2025
Top Story

ಮಾತ್ನಾಡಲು ಅವಕಾಶ ಕೊಡದಿದ್ದಕ್ಕೆ ಸ್ಪೀಕರ್ ಮೇಲೆನೇ ಸಿಡಿದ ಶಿವಲಿಂಗೇಗೌಡ

by ಪ್ರತಿಧ್ವನಿ
August 21, 2025
ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ
Top Story

ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ

by ಪ್ರತಿಧ್ವನಿ
August 21, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

August 21, 2025

ಸದನದಲ್ಲಿ ಶರಣಗೌಡ ಕಂದಕುರ್ ಗಂಭೀರ ಆರೋಪ..!

August 21, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada