ಬಾಹ್ಯಾಕಾಶದಿಂದ ಕುಂಭಮೇಳದ (Kumbh mela 2025) ಅದ್ಭುತ ಚಿತ್ರಗಳನ್ನು ಅಮೆರಿಕದ ಗಗನಯಾತ್ರಿ ಸೆರೆಹಿಡಿದಿದ್ದಾರೆ.ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳ, ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮವಾಗಿದ್ದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ಐಎಸ್‌ಎಸ್) ಇದರ ಫೋಟೋಸ್ ಗಳನ್ನು ಸೆರೆ ಹಿಡಿಯಲಾಗಿದೆ.

ಅಮೆರಿಕದ ನಾಸಾದ ಗಗನಯಾತ್ರಿ ಡಾನ್ ಪೆಟ್ಟಿಟ್ (Don pettit) ಅವರು ಈ ಅದ್ಭುತ ಫೋಟೋಗಳನ್ನು ಸೆರೆಹಿಡಿದಿದ್ದು,ಈ ಚಿತ್ರಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.ಭಾನುವಾರ ಸೆರೆಹಿಡಿಯಲಾದ ಈ ಚಿತ್ರಗಳು ಮಹಾ ಕುಂಭದ ಹಿನ್ನೆಲೆ ಗಂಗಾನದಿಯ (River ganges) ತಟದಲ್ಲಿ ಪ್ರಜ್ವಲಿಸುವ ದೀಪಗಳು ಮತ್ತು ಅಪಾರ ಭಕ್ತ ಸಮೂಹವನ್ನು ತೋರಿಸಿವೆ.

ಈ ಭವ್ಯವಾದ ದೃಶ್ಯಗಳು ಕುಂಭಮೇಳದ ಪ್ರಮಾಣವನ್ನು ಒತ್ತಿಹೇಳುತ್ತವೆ.ವಿಶ್ವದಾದ್ಯಂತ ಜನರನ್ನು ವಿಸ್ಮಯಗೊಳಿಸುತ್ತಿದೆ ಎಂದು ಅಧಿಕೃತ ಬರೆದುಕೊಂಡಿದ್ದಾರೆ.ಚಿತ್ರಗಳನ್ನು ಹಂಚಿಕೊಂಡಿರುವ ಗಗನಯಾತ್ರಿ ಪೆಟ್ಟಿಟ್, ಐಎಸ್‌ಎಸ್‌ನಿಂದ ಮಹಾ ಕುಂಭಮೇಳದ ವೀಕ್ಷಣೆಯ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ.ಈ ಚಿತ್ರಗಳು ಗಂಗಾನದಿಯ ದಡದಲ್ಲಿ ವಿಶ್ವದ ಅತಿದೊಡ್ಡ ಮಾನವ ಕೂಟದ ತೇಜಸ್ಸನ್ನು ಎತ್ತಿ ತೋರಿಸುತ್ತವೆ ಎಂದಿದ್ದಾರೆ.