ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ (California wild fire) ಹಬ್ಬಿದ ಕಂಡು ಕೇಳರಿಯದ ಕಾಡ್ಡಿಚ್ಚಿನ ರೌದ್ರ ನರ್ತನಕ್ಕೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದ್ದು, ಈ ದುರಂತದಲ್ಲಿ ಸುಮಾರು 35,000 ಎಕರೆಗಿಂತ ಹೆಚ್ಚಿನ ಅರಣ್ಯ ಪ್ರದೇಶ ಸಂಪೂರ್ಣ ಸುಟ್ಟು ಭಸ್ಮವಾಗಿದೆ.ಈಗಲೂ ಕೂಡ ಲಾಂಸ್ ಏಂಜಲೀಸ್ (Laas angels) ಬೆಂಕಿಯ ಕೆನ್ನಾಲಿಗೆಯಿಂದ ಹೋರಾಡುತ್ತಿದೆ.

ಈ ವ್ಯಾಪಕ ಬಿಕ್ಕಟ್ಟಿನ ನಡುವೆ, ಕ್ಯಾಲಿಫೋರ್ನಿಯಾದಲ್ಲಿ ಹಬ್ಬಿರುವ ಬೆಂಕಿಯ ಹಲವಾರು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಅದರ ಜೊತೆ ಜೊತೆಗೆ ಪರ್ವತ ಬೆಂಕಿಯಿಂದ ಉರಿಯುತ್ತಿರುವ ಮತ್ತು ಬೆಂಕಿಯ ಜ್ವಾಲೆಗೆ ನಗರಗಳು ಮುಳುಗುತ್ತಿರುವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಹೀಗೆ ಈ ಬಗ್ಗೆ Facebook ಬಳಕೆದಾರರೊಬ್ಬರು,
ಇದೇ ರೀತಿಯ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಇದು ಹಾಲಿವುಡ್ ಸಿನಿಮಾದ ಗ್ರಾಫಿಕ್ಸ್ ಅಲ್ಲ, ಬೆಂಕಿಗೆ ಆಹುತಿ ಆಗುತ್ತಿರುವ ಲಾಸ್ ಏಂಜಲೀಸ್ ಎಂದು ಬರೆದುಕೊಂಡಿದ್ದಾರೆ.
ಆದ್ರೆ ವೈರಲ್ ಆಗುತ್ತಿರುವ ಈ ವಿಡಿಯೋಗಳು ಎಷ್ಟು ನಿಜ..? ಈ ಬಗ್ಗೆ ಪರಿಶೋಧಿಸಲಾಗಿದ್ದು, ಇದು ಎಐ ರಚಿತವಾಗಿದ್ದು, ಇದರಲ್ಲಿರುವುದು ಕಾಡಿಚ್ಚುಗಳ ನೈಜ ತುಣುಕಲ್ಲ ಎಂದು ತಿಳಿದುಬಂದಿದೆ. ಎಐ ಡಿಟೆಕ್ಟರ್ ಮೂಲಕವೇ ಇದನ್ನು ಪರಿಶೀಲಿಸಲಾಗಿದೆ.

ಈ ರೀತಿಯ ಸಾಕಷ್ಟು ವಿಡಿಯೋಗಳನ್ನು ಡಿಟೆಕ್ಟರ್ ವಾಸಿತ್ ಎಐ ಕ್ರಾಸ್ ಚೆಕ್ ಮಾಡಿದ್ದು,ಈ ಪೈಕಿ ಒಂದು ವಿಡಿಯೋವೊಂದನ್ನು ಹೊರತುಪಡಿಸಿ ಉಳಿದೆಲ್ಲವು ನೈಜ ವಿಡಿಯೋ ಅಲ್ಲ ಎಂದು ಹೇಳಲಾಗಿದೆ.

ಇನ್ನು ಹೈವ್ ಮಾಡರೇಶನ್ ಮೂಲಕ ವಿಡಿಯೋ ಪರಿಶೀಲಿಸಿದಾಗ 99.8% ಒಟ್ಟು ಸ್ಕೋರ್ನೊಂದಿಗೆ ಇದು ಡೀಪ್ ಫೇಕ್ ವಿಷಯವನ್ನು ಒಳಗೊಂಡಿರುವ ಸಾಧ್ಯತೆಯಿದೆ ಎಂದು ಹೇಳಿದೆ.ಹಾಗಾಗಿ ಇದು ಎಐ ರಚಿತವಾಗಿದೆ ಎಂದು ತಿಳಿದುಬಂದಿದೆ.