ಯಾಕೋ ಏನೋ ನಟ ಸೈಫ್ ಅಲಿಖಾನ್ (Saif ali khan) ಟೈಮ್ ಸರಿಯಿಲ್ಲ ಅನ್ಸುತ್ತೆ. ಚಾಕು ಇರಿತಕ್ಕೆ ಒಳಗಾಗಿದ್ದ ಸೈಫ್ ಕೊಂಚ ಚೇತರಿಸಿಕೊಂಡಿದ್ದು, ಡಿಸ್ಚಾರ್ಜ್ ಆಗಿ ಮನೆಗೆ ಬರ್ತಿದ್ದಂತೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮಧ್ಯಪ್ರದೇಶದಲ್ಲಿ ಇರುವ ಬರೋಬ್ಬರಿ 15 ಸಾವಿರ ಕೋಟಿ ರೂಪಾಯಿ (15k crores) ಮೌಲ್ಯದ ಆಸ್ತಿ ಮೇಲಿನ ಹಕ್ಕು ಕಳೆದುಕೊಂಡ ಸೈಫ್ ಅಲಿ ಖಾನ್ ಪಟೌಡಿ ಕುಟುಂಬ ಕಳೆದುಕೊಳ್ಳುವ ಸಾಧ್ಯತೆಯಿದೆ.
ಕೇಂದ್ರ ಸರ್ಕಾರದಿಂದ ಎನಿಮಿ ಪ್ರಾಪರ್ಟಿ ಕಾಯ್ದೆಯಡಿ (Enemy property act) ಈ ಆಸ್ತಿ ವಶಕ್ಕೆ ಪಡೆಯಲು ಮುಂದಾಗಿದೆ.ಸೇಫ್ ಅಲಿ ಖಾನ್ ಕುಟುಂಬದವರು 1950 ರಲ್ಲಿ ಪಾಕಿಸ್ತಾನಕ್ಕೆ (Pakistan) ವಲಸೆ ಹೋಗಿದ್ದರು, ಹೀಗಾಗಿ ಮಧ್ಯಪ್ರದೇಶದ ಭೋಪಾಲ್ ನಲ್ಲಿದ್ದ ಆಸ್ತಿಗಳನ್ನು ಕೇಂದ್ರ ಸರ್ಕಾರ ವಶಕ್ಕೆ ಪಡೆದಿತ್ತು. ಎನಿಮಿ ಪ್ರಾಪರ್ಟಿ ಕಾಯ್ದೆಯಡಿ ಕೇಂದ್ರ ಸರ್ಕಾರ ವಶಪಡಿಸಿಕೊಂಡಿತ್ತು.
ಇದನ್ನು ಪ್ರಶ್ನಿಸಿ ಸೈಫ್ ಅಲಿ ಖಾನ್ ಪಟೌಡಿ ಕುಟುಂಬ ಹೈಕೋರ್ಟ್ ಮೆಟ್ಟಿಲೇರಿತ್ತು.ಹೀಗಾಗಿ ಕೇಂದ್ರ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.ಆದರೆ ಈಗ ಹೈಕೋರ್ಟ್ (High court) ತಡೆಯಾಜ್ಞೆ ತೆರವುಗೊಳಿಸಿದೆ.ಇದರಿಂದ ಕೇಂದ್ರ ಸರ್ಕಾರದ ಆಸ್ತಿಗಳನ್ನು ತನ್ನ ಸ್ವಾಧೀನಕ್ಕೆ, ವಶಕ್ಕೆ ತೆಗೆದುಕೊಂಡಿದ್ದ ಆದೇಶ ಮರು ಜಾರಿಯಾಗಿದೆ.
ಈ ಪ್ರಕರಣದಲ್ಲಿ ಸೈಫ್ ಅಲಿಖಾನ್ ಪಟೌಡಿ ಕುಟುಂಬ ಸುಪ್ರೀಂ ಕೋರ್ಟ್ ನಿಂದ ರಿಲೀಫ್ ಪಡೆಯದಿದ್ದರೇ, 15 ಸಾವಿರ ಕೋಟಿ ಆಸ್ತಿ ಸರ್ಕಾರದ ವಶವಾಗೋದು ಖಚಿತ.ಸೈಫ್ ಅಲಿ ಖಾನ್ ಪಟೌಡಿ ಕುಟುಂಬಕ್ಕೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಅವಕಾಶವಿದ್ದು ಮುಂದಿನ ನಡೆ ಕಾಡು ನೋಡಬೇಕಿದೆ.