ಚಿಕ್ಕಮಗಳೂರುಗೆ (Chikkamaglore) ಮುಸುಕುಧಾರಿ ಖದೀಮರ ಗ್ಯಾಂಗ್ ಎಂಟ್ರಿ ಕೊಟ್ಟಿದೆ. ರಾಜ್ಯದಲ್ಲಿ ಸರಣಿ ಕಳ್ಳತನ ದರೋಡೆ ಪ್ರಕರಣಗಳ ಬೆನ್ನಲ್ಲೇ ಕಾಫಿನಾಡು ಚಿಕ್ಕಮಗಳೂರಿನಲ್ಲೂ ಮುಸುಕುಧಾರಿ ಗ್ಯಾಂಗ್ ಹಾವಳಿ ಹೆಚ್ಚಾಗಿದೆ.

ಈ ಗ್ಯಾಂಗ್ ಹಾವಳಿಯಿಂದ ಜನರಲ್ಲಿ ಆತಂಕ ಮನೆಮಾಡಿದ್ದು, ಬೆಳಿಗ್ಗೆ ಸಂದರ್ಭದಲ್ಲಿ ಸ್ಕೆಚ್ ಹಾಕಿ , ರಾತ್ರಿ ವೇಳೆಯಲ್ಲಿ ಈ ಗ್ಯಾಂಗ್ ಆಕ್ಟಿವ್ ಆಗುತ್ತದೆ.ಗುರುತು ಪತ್ತೆಯಾಗದಂತೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮನೆಗಳನ್ನು ಕಳ್ಳತನ ಈ ಗ್ಯಾಂಗ್ ಕಳ್ಳತನ ಮಾಡುತ್ತದೆ.

ಈ ಚಾಲಾಕಿ ಖದೀಮನ ಗ್ಯಾಂಗ್ ಮನೆಯಲ್ಲಿರುವ ಸಿಸಿಟಿವಿಯನ್ನು ಬೇರೆ ದಿಕ್ಕಿಗೆ ತಿರುಗಿಸಿ ಬೀಗ ಒಡೆದು ಕಳ್ಳತನ ಮಾಡುತ್ತಾರೆ.ಇದೇ ರೀತಿ ಹಿರೇಮಗಳೂರಿನಲ್ಲಿ ಮನೆಯೊಂದರಲ್ಲಿ ಕಳ್ಳರ ಗ್ಯಾಂಗ್ ಕೈಚಳಕ ತೋರಿಸಿದೆ.
ಹಿರೇಮಗಳೂರಿನ ರಾಮಮ್ಮ ಎನ್ನುವರ ಮನೆಯಲ್ಲಿ ಕಳ್ಳತನ ಮಾಡಿದ್ದು,ಮನೆಯ ಬೀಗ ಒಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.











