ಬೆಳಗಾವಿಯ ಚಳಿಗಾಲದ ಅಧಿವೇಶನದ (Winter session) ವೇಳೆ ವಿಧಾರಣಪರಿಷ್ ನಲ್ಲಿ ನಡೆದ ಹೈಡ್ರಾಮ ಈಗ ಮತ್ತೆ ಮುನ್ನಲೆಗೆ ಬಂದಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೆ (Lakshmi hebbalkar) ವಿಧಮಪರಿಷತ್ ಸದಸ್ಯ ಸಿಟಿ ರವಿ (CT ravi) ಅವಾಚ್ಯ ಪದ ಬಳಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಐಡಿ (CID) ಟೀಮ್ ಪ್ರಾಥಮಿಕ ತನಿಖೆ ನಡೆಸಿದ್ದು, ಈ ವೇಳೆ ಸಿಟಿ ರವಿ ಅವಾಚ್ಯ ಪದ ಬಳಸಿರೋದು ದೃಢಪಟ್ಟಿದೆ.

ಈ ಬಗ್ಗೆ ಪರಿಷತ್ ಕಲಾಪದ ಸುಮಾರು ನಾಲ್ಕು ಗಂಟೆಗಳ ಫೂಟೇಜ್ (Video footage) ಸಂಗ್ರಹಿಸಿ ಸೂಕ್ಷ್ಮವಾಗಿ ಸಿಐಡಿ ಟೀಮ್ ಗ್ರಹಿಸಿದ್ದು, 4 ಗಂಟೆಗಳ ಅವಧಿಯ ವಿಡಿಯೋದಲ್ಲ ಸಿಟಿ ರವಿ ಸುಮಾರು 7 ಬಾರಿ ಸಚಿವೆಗೆ ಅವಾಚ್ಯ ಪದ ಬಳಸಿದ್ದಾರೆ ಎಂದು ಸಿಐಡಿ ಹೇಳಿದೆ.

ಇನ್ನು ವಿಡಿಯೋದಲ್ಲಿ ಇರುವ ಧ್ವನಿ ಸಿಟಿ ರವಿ ಅವರದ್ದೇ ಎಂದು ಖಾತ್ರಿ ಪಡಿಸಿಕೊಳ್ಳುವ ಸಲುವಾಗಿ FSL ಗೆ ಕಳುಹಿಸಬೇಕಿದ್ದು, ಇದಕ್ಕಾಗಿ ರವಿ ಅವರ ಧ್ವನಿ ಮಾದರಿ ಸಂಗ್ರಹಿಸಬೇಕಿದೆ. ಆದ್ರೆ ಇದಕ್ಕೆ ಸಿಟಿ ರವಿ ಒಪ್ಪಿಲ್ಲ ಎನ್ನಲಾಗಿದೆ. ತಮ್ಮ ವಾಯ್ಸ್ ಸಮೋಲ್ ನೀಡಲು ರವಿ ನಿರಾಕರಿಸಿದ್ದಾರೆ ಎನ್ನಲಾಗಿದೆ.
ಹೀಗಾಗಿ ಸಿಟಿ ರವಿ ತನಿಖೆಗೆ ಸ್ಪಂದಿಸುತ್ತಿಲ್ಲ ಎಂದು ಸಿಐಡಿ ಟೀಮ್ ಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದ್ದು, ಆ ಮೂಲಕ ಸಿಟಿ ರವಿ ವಾಯ್ಸ್ ಸ್ಯಾಂಪಲ್ ಗಾಗಿ ಸಿಐಡಿ ಮನವಿ ಮಾಡಬಹುದು.