ನಮ್ಮ ಪಕ್ಷ ಉಂಟು. ನಾನುಂಟು ಎಂಬ ಡಿಸಿಎಂ (Dcm) ಅವರ ವೈರಾಗ್ಯದ ಮಾತುಗಳ ವಿಚಾರಕ್ಕೆ ಸಂಬಂಧಪಟ್ಟಂತೆ, ಅದು ಒಳ್ಳೆಯ ತೀರ್ಮಾನ ಎಂದು ಗೃಹ ಸಚಿವ ಪರಮೇಶ್ವರ್ (Prameshwar) ಟಾಂಗ್ ಕೊಟ್ಟಿದ್ದಾರೆ.ಯಾಕೆಂದರೆ ಪಕ್ಷ ಅಂತಿಮವಾಗಿ ಏನು ತೀರ್ಮಾನ ಮಾಡುತ್ತೋ ನಾವೆಲ್ಲ ಅದನ್ನು ಒಪ್ಕೋತೇವೆ ಎಂದು ಹೇಳಿದ್ದಾರೆ.

ನಮ್ಮ ಹೈಕಮ್ಯಾಂಡ್ (Highcommand)ಏನು ಹೇಳುತ್ತೋ ಅದೇ ಅಂತಿಮ. ಹಾಗಾಗಿ ನಾವೆಲ್ಲ ಅಂತಿಮವಾಗಿ ಹೈಕಮಾಂಡ್ ಅಂತನೇ ಹೇಳೋದು. ಪಕ್ಷದ ತೀರ್ಮಾನ ಏನಾಗುತ್ತೋ ಅಂತಿಮವಾಗಿ ಅದೇ ಆಗೋದು.ನಿನ್ನೆ ಕೂಡಾ ನಾನು ಅದನ್ನೇ ಹೇಳಿದ್ದೆ, ಪಕ್ಷ ಏನು ಹೇಳುತ್ತೋ ನಾವೆಲ್ಲ ಅಂತಿಮವಾಗಿ ಅದೇ ಒಪ್ಕೋತೇವೆ ಅಂದಿದ್ದೆ ಎಂದಿದ್ದಾರೆ.

ಹೀಗಾಗಿ ಡಿಸಿಎಂ ಶಿವಕುಮಾರ್ (Dcm Dk Shivakumar) ಸಹ ಅದೇ ಮಾತಾಡಿದ್ದಾರೆ, ಬಹಳ ಸಂತೋಷ. ಪಕ್ಷದ ಚೌಕಟ್ಟಿನಲ್ಲಿ ಹೋಗೋದು ನಮ್ಮೆಲ್ಲರ ಕರ್ತವ್ಯ, ಅದನ್ನು ನಾವು ಮಾಡ್ತೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.